ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ವರದಿಯಾಗಿದೆ. ಕೂತ್ಕುಂಜ ಗ್ರಾಮದ ಚಿದ್ದಲ್ಲು ಗೋಪಾಲ್ ಮತ್ತು ಹೊನ್ನಮ್ಮ ದಂಪತಿಯ ಪುತ್ರ ಬಿಪಿನ್ ಜೀವ ಕಳೆದುಕೊಂಡ ಯುವಕ.
ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ಬಿಪಿನ್, ಗೆಳೆಯರೊಂದಿಗೆ ಪಾಂಡಿಚೇರಿಗೆ ಬೀಚ್‌ಗೆ ಹೋಗಿದ್ದ ವೇಳೆ ಸಮುದ್ರಪಾಲಾಗಿದ್ದು, ಇಂದು ಮೃತದೇಹ ಪತ್ತೆಯಾಯಿತೆಂದು ತಿಳಿದುಬಂದಿದೆ. ಮೃತರು ತಂದೆ ತಾಯಿ, ಸಹೋದರಿ ರಚನಾ ಚಿದ್ಗಲ್ ರನ್ನು ಅಗಲಿದ್ದಾರೆ. ನಾಳೆ ಪಾಂಡಿಚೇರಿಯಲ್ಲಿ ಪೋಸ್ಟ್ ಮಾರ್ಟಂ ನಡೆದ ಬಳಿಕ ಮೃತದೇಹ ತರಲಿದ್ದಾರೆ ಎಂದು ತಿಳಿದುಬಂದಿದೆ.