ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಇವರ ಸಹಯೋಗದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರ ನೆನಪು ಕಾರ್ಯಕ್ರಮ ಹಾಗೂ ಗೀತಾ ಸಾಹಿತ್ಯ ಗಾಯನ ಕಾರ್ಯಕ್ರಮವು ನವಂಬರ್ ಎರಡರಂದು ಅಪರಾಹ್ನ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸುಳ್ಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸುಳ್ಯ ಇದರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಕಾಡು ತೋಟ ಇವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ದೀಪ ಬೆಳಗುವುದರ ಮೂಲಕ ನಡೆಸಿಕೊಟ್ಟರು ಹಾಗೂ ಉದ್ಘಾಟನಾ ಮಾತುಗಳನ್ನಾಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ನೆನಪು ಕಾರ್ಯಕ್ರಮವನ್ನು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕಿ ಶ್ರೀಮತಿ ಮಮತಾ ಎಂ ಜೆ ಇವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಎಸ್ ಡಿ.ಎಂ ಸಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಕಾಡು ತೋಟ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ,ಹಿರಿಯ ಶಿಕ್ಷಕರಾದ ಶ್ರೀ ಸುಂದರ ಕೇನಾಜೆ ,ಶ್ರೀಮತಿ ಮಮತಾ ಎಂ ಜೆ ,ಗೌರವ ಕಾರ್ಯದರ್ಶಿಗಳಾದ ಶ್ರೀ ತೇಜಸ್ವಿ ಕಡಪಳ ಮತ್ತು ಶ್ರೀಮತಿ ಚಂದ್ರಮತಿ, ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತು ಪ್ರತಿನಿಧಿಗಳಾದ ಶ್ರೀರಾಮಚಂದ್ರ ಪಲ್ಲತ ಡ್ಕ , ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿಗಳಾದ ಶ್ರೀ ದಯಾನಂದ ಆಳ್ವ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹೆಸರಾಂತಗಾಯಕರಾದ ಕೆ ಆರ್ ಗೋಪಾಲಕೃಷ್ಣ ಅಧ್ಯಕ್ಷರು ಭಾವನಾ ಸುಗಮ ಸಂಗೀತ ಸುಳ್ಯ, ತೇಜಸ್ ಕಲ್ಲುಗುಂಡಿ ,ಶ್ರೀಮತಿ ಆರತಿ ಪುರುಷೋತ್ತಮ ಹಾಗೂ ಸಂಧ್ಯಾ ಮಂಡೆಕೋಲು ಇವರಿಂದ ವೈವಿಧ್ಯಮಯ ಗೀತಾ ಸಾಹಿತ್ಯ ಗಾಯನ ಕಾರ್ಯಕ್ರಮ ನಡೆಯಿತು ಸುಮಾರು 650 ವಿದ್ಯಾರ್ಥಿಗಳು ಮತ್ತು ಎಲ್ಲ ಶಿಕ್ಷಕ ವೃಂದದವರು ಕಾರ್ಯಕ್ರಮವನ್ನು ವೀಕ್ಷಿಸಿ ದರು.
- Saturday
- November 23rd, 2024