
ಐವರ್ನಾಡಿನ ಪ್ರಗತಿಪರ ಕೃಷಿಕ ಹಾಗೂ ಮುತ್ತು ಕೃಷಿ ಮಾಡಿ ಸಾಧನೆ ಮಾಡಿದ ನವೀನ್ ಚಾತುಬಾಯಿ ಮನೆಗೆ ಸೋಮವಾರಪೇಟೆಯ ಕೃಷಿ ಇಲಾಖೆಯ ತಂಡ ಭೇಟಿ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ರೈತರ ಅಧ್ಯಯನ ಪ್ರವಾಸಕ್ಕಾಗಿ ಕೊಡಗಿನ ಸೋಮವಾರಪೇಟೆಯ ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಯೋಜನೆಯ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಾದ ಮಿಲನ ಭರತ್ ಮೇಡಂ ಮತ್ತು ಕೃಷಿ ಅಧಿಕಾರಿ ಹರೀಶ್ ಅವರ ನೇತೃತ್ವದಲ್ಲಿ ಜಿಲ್ಲೆಯ ರೈತರು ಹಾಗೂ ಆಸಕ್ತರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಕೃಷಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.


