Ad Widget

ಅರೆಭಾಷಿಗರ ಬಳಿ ಪದ್ಧತಿ ಬಗ್ಗೆ ಒಂದಿಷ್ಟು

ಬೇಸಾಯ ಕೆಲ್ಸ ಬಾರಿ ಕಷ್ಟಲಿ ಮಾಡುವ ಕೆಲ್ಸ ಸ್ವಾವಲಂಬಿಗ, ಸ್ವಾಭಿಮಾನಿಗಳ ನೀತಿಗಳ, ನಿಯಮಗಳ ಪಾಲಿಸುವವು ಗೌಡ್ರುಗ. ಗೌಡ ಎಂಬ ಪದದ ಬಗ್ಗೆ ತುಂಬಾ ರೀತಿಲಿ ಊಹೆಗ ನಡ್ದಿತ್ತ್. ಇದ್ರಲ್ಲಿ ತುಂಬಾ ಮುಖ್ಯದ್ ಬಂಗಾಳದವು. ಅಲ್ಲಿ ಕಬ್ಬು ಮತ್ತು ಬೆಲ್ಲ ಮಾಡ್ದ್ ತುಂಬಾ ಹೆಸರಾಗಿತ್ತ್. ಬೆಲ್ಲಕ್ಕೆ ಆರ್ಯನ್ ಭಾಷೆಲಿ ಗುಡ ಅಂತ ಹೇಳುವೆ. ಬೆಲ್ಲ ಮಾಡುವ ಬಂಗಾಳ ಊರ್ನ ಗೌಡ ದೇಶಂತಾ ಗೂರ್ತುಸ್ತ ಇದ್ದ. ಗೌಡ ದೇಶದ ನಿವಾಸಿಗನೇ ಮತ್ತೆ ಗೌಡ್ರು ಅಂತ ಹೆಸರ್ ಆದ.
ಗ್ರಾಮ ವೃದ್ಧಾಂತಾ ಹೇಳುವ ಪದ ಎಲ್ಲ ಕಡೆ ಇತ್ತಾ ಮತ್ತೇ ಅದ್ ಹೋತಾ ಹೋತಾ ಸಂಸ್ಕೃತಲಿ ಗ್ರಾಮ ವೃಡ್ಡಾಂತ ಆತ್. ಮತ್ತೇ ಗ್ರಾಮುಡ್ಡ, ಗ್ರಾಮುಂಡ, ಗಾವುಂಡ ಇಂತದೆಲ್ಲ ಹೆಸ್ರ್ ನ ತಕಂತ್ ಲಾಸ್ಟಿಗೆ ಗೌಡಂತ ಆತ್ ಮತ್ತೇ ಅದ್ ಎಲ್ಲಾ ಒಂದು ಗೌಡ ಜಾತಿ ಅಂತ ಆತ್.
ಗೋತ್ರ ಅಂತಾ ಹೇಳಿರೆ ಗೋವುಗಳ ರಕ್ಷಣೆಗಿರುವ ಜಾಗ ಗೋ ಸಮೂಹ ಇಂತದೆಲ್ಲ ಅರ್ಥ ಉಟ್ಟು. ದನಗ ಎಲ್ಲಬೇರೆ ಬೇರೆ ಕಡೆ ಹೋತ ಇದ್ದ. ಜನಗ ಇಂತದೊಂದು ಗುಂಪಿಗೆ ಗೋತ್ರ ಅಂತ ಹೇಳ್ದು ಇತ್ತ್. ಆ ಗುಂಪು ಯಾರ ಸ್ವಂತದಾಗಿತ್ತಾ ಅವುಕ್ಕೆ ಅವನಿ ಹೆಸ್ರ್ ನ ಗೋತ್ರಾಂತ ಆಗಿತ್ತ್. ಗೌಡ್ರುಲಿ ಇಂತದೊಂದು ವ್ಯವಸ್ಥೆ ಇಲ್ಲದಕ್ಕೆ ಹತ್ತ್ ಕುಟುಂಬ ಹದಿನೆಂಟು ಗೋತ್ರ. ಗೊತ್ರಾಂತ ಹೇಳ್ದರ ಅರ್ಥ ಬಳಿಂತ ಹೇಲ್ದ್ ಅಷ್ಟ್ ಹೊಂದಿಕೊಂಡ್ ಇತ್ಲೆ. ಆದ್ರೆ ಅವ್ ಮಾತ್ಲಿ ಹೆಂಗೋ ಬಳಿಂತಾ ಹೆಸರ್ ಆವುಟ್ಟು. ಬಳಿಂತಾ ಹೇಳಿರೆ ಹಕ್ಕಲೆ ಮೂಲಾರ್ಥವಾಗುಟು ಇದ್ ಸಂಸ್ಕೃತ ಪದ. ಗೋತ್ರ ವಂಶಕುಲ ಎಂಬ ಸಣ್ಣ ಅರ್ಥನೇ ನಾವು ಮಾತ್ಲಿ ಹೇಳ್ವೆ.
ಗೌಡ್ರು ಎಂತದ್ದೋ ಕಾರಣಕ್ಕೆ ಐಗೂರು ಸೀಮೆಯಿಂದ ಘಟ್ಟ ಇಲ್ದ್ ತುಳುನಾಡಿನ ಕಡೆ ವಲಸೆ ಬಂದ. ಹಾಂಗೆ ವಲಸೆ ಬಂದವು ಹತ್ತ್ ಕುಟುಂಬಕ್ಕೆ ಸೇರ್ದವುಆಗಿದ್ದ. ಈ ಹತ್ತ್ ಕುಟುಂಬಗಲ್ಲಿ ಮುಂದೆ ಹತ್ತ್ ಬಳಿಗ ಇದ್ದವ್ ನಮ್ಮ ಸಮಾಜಕ್ಕೆ ಇನ್ನೂ ಕೆಲವರ ಸೇರ್ಸಿಕಂಬ ಅಗತ್ಯವಾತ್ ಹಂಗೆನೇ ಹೊಸಬರ ಗುಂಪು ಸೇರಿಸಿಕಂಡ್ ಅದಕ್ಕೊಂದು ಹೆಸರ್ ನ ಕೊಟ್ಟು ನಮ್ಮ ಜಾತಿಲಿ ಸೇರ್ಸಿಕಂಡ್ ಬಳಿ ಹತ್ತ್ ಇದ್ದವು ಹದಿನೆಂಟ್ ಆತ್ ವಲಸೆ ಬಂದವು ಹೊಸಜಾಗಲಿ ಬೇರೆ ಜನಗ ಇದ್ದ. ಅಲ್ಲಿಯ ಸ್ಥಳೀಯವು ಇದರ ಮೇಲೆ ದಬ್ಬಾಳಿಕೆ ಮಾಡಿಕೆ ಸುರು ಮಾಡ್ದ ಹಿಂಗೆ ಇರ್ಕನ ನಮ್ಮಲ್ಲಿ ಜನಗಳ ಸಂಖ್ಯೆ ಹೆಚ್ಚಾಕುಂತಾ ಶ್ರಿಂಗೇರಿನ ಗುರುಪಿತನ ಅವಲಂಬಿಸಿದ್ದ. ಏಕೈಕ ಗುರುಪೀಠ ಶೃಂಗೇರಿ ಹತ್ತ್ ಇದ್ದದ್ ವಿಜಯನಗರದ ಮಾಧವಚರ್ಯ ಗುರುಪೀಠ ಆಚರಿಸ್ತ ಇದ್ದ ವಿಜಯನಗರದ ಪ್ರತಿಯೊಬ್ಬ ಅರಸನು ಶೃಂಗೇರಿ ಪೀಠಕ್ಕೆ ದತ್ತಿ ದಾನಗಳ ಕೊಟ್ಟಿದ್ದ. ಸಜಾತಿಗೆ ಮೀಸೂದ ಗುರುಪೀಠ ಇಲ್ಲದಾಕನ ಶೃಂಗೇರಿ ಪೀಠದ ಗುರುಗ ನಿರ್ದೇಶಿಸಿದ ಗೌಡರ ನಡವಳಿಕೆಗಳ ನಂಬಿಕಂಡ್ ಬಂದಳ. ಒಂದೇ ಬಳಿ ಸಂಬಂಧ ಪಟ್ಟವರ ಒಟ್ಟಿಗೆ ಮದುವೆ ಮಾಡಿಕೆ ಆಗದ್ ಅಂತ ಹೇಳುವ ಜನಾಗ ತುಂಬಾ ನಂಬಿಕಂಡ್ ಅದರ ಈಗಲೂ ಕೂಡ ಹೆಚ್ಚಿನ ಮನೇಲಿ ಆಚರಿಸುವೆ.
ಕೆಲವರ ಮನೇಲಿ ಮಕ್ಕ ಪ್ರೀತಿ ಅಂತಾ ಹೆಳ್ಕಂಡ್ ನಮ್ಮ ಪದ್ಧತಿನ ಎಲ್ಲಾ ಬುಟ್ಟು ಹಾಕುವೇ ಅವುಕ್ಕೆ ಬಳಿಂತಾ ಎಲ್ಲಾ ಇರ್ದುಳೆ. ವಲಸೆ ಬಂದವರಲ್ಲಿ ಎರಡ್ ಗುಂಪು ಆತ್ ಒಂದ್ ಗುಂಪು ದಕ್ಷಿಣ ಕನ್ನಡ ಅಂತಾ ಕರೆಯುವ ಕಡೆಗೆ ಇನ್ನೊಂದ್ ಪೂರ್ವಾಭಿಮುಖಾವಾದ ಕೊಡಗ್ ಕಡೆಗೆ. ಕೋಡಗ್ಲಿ ಜನರ ಸಂಖ್ಯೆ ಕಡಿಮೆ ಆತ್ ಅಲ್ಲಿ ಕಾಡ್ ಹೆಚ್ಚ್. ಅಲ್ಲಿನ ಅರಸಗ ಹೊಸ ಜನಗ ಅಂತಾ ಎಲ್ಲವೂ ಅವುಕ್ಕೆ ಪ್ರೋತ್ಸಾಹ ಕೊಟ್ಟು. ಬಂದವು ಕಾಡ್ನ ತೆಗ್ಧ್ ಹೊಸ ಗದ್ದೆ, ತೋಟಗಳ ಮಾಡಿಕಂಡ್ ಜೀವನ ನಡ್ಸಿದ್ದ. ಅದೇ ದಕ್ಷಿಣ ಕನ್ನಡ ಸೈಡ್ ಹೋದವುಕ್ಕೆ ಇಂತದಕ್ಕೆಲ್ಲ ಅವಕಾಶ ಸಿಕ್ಕಿತ್ಲೆ ಅಲ್ಲಿ ಮುಂದೇನೆ ಬೆಲ್ಸಿದ್ದ ದೊಡ್ಡ ಮಾಲೀಕರಿಂದ ಹಿಡುವಳಿಗಳ ಗೇಣಿಗೆ ಅಂತಾ ತಕಂಡ್ ಬೇಸಾಯಗಾರರ್ ಆದ. ಅಲ್ಲಿ ತುಳುವರ್ ಇದ್ದದಕ್ಕೆ ಕೆಲವುಕ್ಕೆ ತುಳುವೇ ತಮ್ಮ ಮಾತೃ ಭಾಷೆ ಆತ್. ಹಂಗೆ ಗೌಡ್ರುಗಲ್ಲಿ ತುಳು ಮತ್ತು ಕನ್ನಡದ ಇನ್ನೊಂದು ಭಾಗ ಅರೆಭಾಷೆ ಮಾತಾಡುವ ಜನಗ ಅಂತಾ ಭಾಗ ಆತ್. ಹಿಂಗೆ ಇವು ಮಾಡೋ ಕಾರ್ಯಗ ಎಲ್ಲಾ ಒಂದೇ ತರ ಇತ್ತ್. ಗೌಡ್ರುಗ ತುಳುನಾಡ್ಲಿ ಬಳಿ ಪದ್ಧತಿ ಹೊಂದಿದ್ದ ಬೇರೆ ಬೇರೆ ಬಳಿಗಳಲ್ಲಿ ಮದುವೆ ನಡೆತಿತ್ತ್. ಗೌಡ್ರುಗಳಿಗೆ ಮುಖ್ಯವಾಗಿ ಅಪ್ಪನ ಮೂಲವಾಗಿತ್ತ್.
ಗೌಡ್ರು ವರ್ಣರ ಪಂಜುರ್ಲಿ,ಕುಪ್ಪೆ ಪಂಜುರ್ಲಿ ದೈವ, ಪಾಷಾಣ ಮೂರ್ತಿ, ರಕ್ತೇಶ್ವರಿ ಹಿಂಗೆನೇ ಇನ್ನೂ ದೈವಗಳ ಮತ್ತು ದೈವಸ್ಥಾನ ಸಂಬಂಧಗಳ ಹೊಂದಿದ್ದ. ತಮ್ಮ ಹಿರಿಯವು ಆರಾಧನೆ ಮಾಡ್ತಾ ಇದ್ದ ಹೊಸಕೋಟೆ, ಬನಗುರು ಸಬ್ಬಮ್ಮ ಶಕ್ತಿನ ಆರಾಧಿಸುತ್ತಾ ಇದ್ದ.
ತಿರುಪತಿ ವೆಂಕಟರಮಣ ದೇವರ ಮುದಿಪು ಸೇವೆ ಕೂಡ ಮಾಡ್ತಾ ಇದ್ದ. ಕೂಜುಗೋಡು, ಕಟ್ಟೆಮನೆ ಸಂತತಿ ನಕ್ಷೆಯ ಪ್ರಕಾರ ಅಪ್ಪಯ್ಯ ಗೌಡರ ಕಾಲಲಿ ಶೃಂಗೇರಿ ಸ್ವಾಮಿ ಸುಬ್ರಹ್ಮಣ್ಯಕ್ಕೆ ಬಾಕನ ಕಟ್ಟೆಮನೆಯ ಹಿರ್ಯರ ಕರ್ಸಿ ” ನಿಮ್ಮ ಈ ಊರ್ಲಿ ಗೌಡ್ರ ಸಂಖ್ಯೆ ಜಾಸ್ತಿ ಇದ್ದರಿಂದ ನೀವು ಕಟ್ಟೆಮನೆ ಗೌಡ್ರ ಕಣ್ಯ ಹಂಗೆ ಗುರುಮಠಕ್ಕೆ ಸಿಷ್ಯರಾಕುಂತ ” ಹೇಳಿದ್ದಕ್ಕೆ ಒಪ್ಪಿಕೊಂಡ.

. . . . . . .

ಗೌಡ್ರಿಗೆ ಸಂಬಂಧಪಟ್ಟ ಕುಟುಂಬ ಬ್ರಾಹ್ಮಣ, ದಾಸಯ್ಯ, ಕ್ಷಾರಿಕ, ವಿಶ್ವಕರ್ಮ ಮೂಲದವು ಮಡಿವಾಳ, ನೇಕಾರ, ಚಾಲ್ಯರ್, ಗಾಣಿಗ, ಸಮಗಾರ್, ಬಾರಿಕೆಯರ್ ಮಲೆಕುಡಿಯರ್ ಸ್ವಾಮೀಜಿಗ ಹೇಳ್ದ ಪ್ರಕಾರ ಪ್ರತಿಯೊಂದು ಊರ್ನಿಂದ ಒಬ್ಬೊಬ್ಬರ ಕರ್ಸಿ ಊರ ಗೌಡ್ರು, ಮಾಗಣೆ ಗೌಡ್ರುಂತ ಮಾಡ್ದ. ಆ ಕಾಲಲಿ ನೇಮಕಗೊಂಡ ಊರುಗೌಡ್ರುಗ ಪ್ರತಿ ಮನೆ ಮನೆಗೆ ಹೋಗಿ ಶೃಂಗೇರಿ ಮಠಕ್ಕೆ ದುಡ್ಡು ತಗಂಡ್ ಊರ್ಲಿ ನಡೆಯುವ ವಾದ - ವಿವಾದಗಳ ಪರಿಹರಿಸಿ ನ್ಯಾಯ ಕೊಡ್ದ್, ಲಗ್ನ - ಮದುವೆಗಳಿಗೆ ದುಡ್ಡು ತಗಂದು ಬೇರೆ ಯಾವುದಾರ್ ಹಿಂಗೆ ಶುಭಕಾರ್ಯಗಳಿಗೆ ಹೋಗಿ ಕಾರ್ಯನ ನಡೆಸಿಕೊಡ್ದು ಊರಾಗೌಡ್ರ ಕೆಲಸ ಆಗಿತ್ತ್. ನಮ್ಮ ಜನಾಂಗದವರಲ್ಲಿ ಹಿಂದೆ ಒಂದ್ ವ್ಯವಸ್ಥಿತವಾದ ಜೀವನ ಕ್ರಮ ಆತ್ತ್. ಊರಿಗೊಬ್ಬ ಗೌಡ ನಾರಿಗೊಬ್ಬ ದೊರೆ ಎಂಬ ಮಾತ್ ಇತ್ತ್ ಅದರ ಹಂಗೆ ಊರರ್ಗೌಡ್ರಿಗೆ ತುಂಬಾ ಬೆಲೆ ಇತ್ತ್ ಗೌಡರ ನೆರವಿಲಿ ಕಾರ್ಯಗ ನಡೀತಾ ಇದ್ದ.

ಹದಿನೆಂಟು ಬಳಿಗ (ಗೊತ್ರಗ) ನಂದರ ಬಳಿ, ಹೆಮ್ಮನ ಬಳಿ, ಬಂಗಾರು ಬಳಿ, ಮೂಲರ ಬಳಿ, ಚಾಲ್ಯರ ಬಳಿ, ನಾಯರ್ ಬಳಿ, ಗೋಳಿ ಬಳಿ, ಗುಂಡಣ್ಣ ಬಳಿ, ಕಬರ್ ಬಳಿ, ಚಿತ್ತರ್ ಬಳಿ, ನಾಡ ಬಳಿ, ಬ್ಯಸಣ್ಣ ಬಳಿ, ಕರ್ಬನ ಬಳಿ, ಚೌದನ ಬಳಿ, ಸಾತಿ ಬಳಿ, ಲಿಂಗಾಯಿತ ಬಳಿ, ಕರಂಬೆರ್ ಬಳಿ, ಕುತ್ತಿಗುಂಡ ಬಳಿ.

ಅನನ್ಯ ಎಚ್ ಸುಬ್ರಹ್ಮಣ್ಯ ✍️
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು ಪತ್ರಿಕೋದ್ಯಮ ವಿದ್ಯಾರ್ಥಿನಿ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!