Ad Widget

ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಐಶ್ವರ್ಯ ಪೋಷಕರು

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಶ್ರೀಮತಿ ಐಶ್ವರ್ಯ ಳ ಮನೆಯವರು ಆಕೆಯ ನೇತ್ರದಾನ ಮಾಡುವ ಮೂಲಕ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

. . . . . . .

ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ಅವರನ್ನು ರಾಜೇಶ್ ಅವರಿಗೆ ಸುಮಾರು 4 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಬಳಿಕ ಐಶ್ವರ್ಯ ರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪತಿ ರಾಜೇಶ್ ಸ್ವಂತ ಐಸ್ ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಐಶ್ವರ್ಯ ಳ ತಂದೆ ತಾಯಿ ಕೂಡ ಬೆಂಗಳೂರಿನಲ್ಲೇ ನೆಲೆಸಿದ್ದು, ಕೆಲ ಸಮಯಗಳಿಂದ ಐಶ್ವರ್ಯ ತನ್ನ ತಾಯಿ ಮನೆಗೆ ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!