Ad Widget

ಮಹಿಳೆಯ ಬೆತ್ತಲೆ ಫೊಟೋ ತೆಗೆದು ಬ್ಲ್ಯಾಕ್‌ಮೇಲ್ ಆರೋಪ – ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ ಪ್ರಶಾಂತ್ ಮಾಣಿಲ ಬಂಧನ

ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿ ಆಕೆಯ ಬೆತ್ತಲೆ ಫೊಟೋ ತೆಗೆದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಸುಬ್ರಹ್ಮಣ್ಯದ ಪ್ರಶಾಂತ್ ಭಟ್ ಮಾಣಿಲ ಕಾರವಾರ ಪೊಲೀಸರಿಂದ ಬಂಧನಕ್ಕೊಳಗಾಗಿರುವುದಾಗಿ ತಿಳಿದು ಬಂದಿದೆ.

ಕ್ಲಬ್ ಹೌಸ್ ಅಪ್ಲಿಕೇಷನ್ ಹಾಗೂ ಫೇಸ್ ಬುಕ್  ಮೂಲಕ ಪರಿಚಯವಾಗಿದ್ದ ಕಾರವಾರ ಮೂಲದ ಮಹಿಳೆಯ ಫೋನ್ ನಂಬರ್ ಪಡೆದ ಪ್ರಶಾಂತ ಭಟ್ ಪ್ರೀತಿಯ ನಾಟಕ ಮಾಡಿ ಸುಮಾರು 2 ವರ್ಷಗಳಿಂದ ಫೋನ್ ನಲ್ಲಿ ಮೆಸೇಜ್ ಹಾಗೂ ಕಾಲ್ ದಲ್ಲಿ ಸಂಪರ್ಕದಲ್ಲಿ ಇದ್ದರೆನ್ನಲಾಗಿದೆ.  ಇದೀಗ ತನ್ನನ್ನು ಅತ್ಯಾಚಾರ ಮಾಡಿದ್ದಾರೆಂದು ಪ್ರಶಾಂತ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಆರೋಪಿಯು ತನ್ನನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ರೂಮ್ ಮಾಡಿ ಲೈಂಗಿಕವಾಗಿ ಬಳಸಿ ದೂರುದಾರಳೊಂದಿಗೆ ತನ್ನ ಫೋಟೋಗಳನ್ನು ತೆಗೆದುಕೊಂಡಿದ್ದು ಇದೀಗ ವಾಟ್ಸಪ್‌ನಲ್ಲಿ ಮೆಸೆಜ್ ಮಾಡಿ, ನನ್ನ ನಿನ್ನ ಇಬ್ಬರ ಫೋಟೋ ಹಾಗೂ ನಿನ್ನ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ನಿನ್ನ ತಾಯಿ ಹಾಗೂ ನಿನ್ನ ಗಂಡನಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದು, ನಂತರ ದೂರುದಾರಳಿಗೆ ಆರೋಪಿಯು ವೀಡಿಯೋ ಕಾಲ್ ಮಾಡಿ, ಆಶ್ಲೀಲವಾಗಿ ವರ್ತಿಸುತಿದ್ದು, ನನಗೆ ಹಣದ ಸಮಸ್ಯೆ ಇದೆ, ನೀನು ನನಗೆ ಹಣ ನೀಡು, ಇಲ್ಲವಾದಲ್ಲಿ ನಾನು ನಿನ್ನ ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವೆ ಎಂದು ಪ್ರತಿ ದಿನ ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ‌. ಹಾಗೂ  ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸಿ, ರೂ. 25,000 ಗಳನ್ನು ಆತನ ಮೊಬೈಲ್ ನಂಬರಿಗೆ ಗೂಗಲ್ ಪೇ ಮಾಡಿಸಿದದ್ದೇನೆ. ಆದರೇ ಪ್ರಶಾಂತ್ ಭಟ್ ಮಾಣಿಲ ತನಗೆ ಇನ್ನೂ ಹಣ ಬೇಕು ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾ,  ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ತನ್ನ ತಾಯಿಯ ಮೊಬೈಲಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ. ಅಲ್ಲದೇ ನಂತರ ಫೇಸ್ ಬುಕ್ ನಲ್ಲಿ ತನ್ನ ಸ್ನೇಹಿತರಿಗೂ ಕಳುಹಿಸಿದ್ದಾನೆ. ನಂತರ ಗಂಡನಿಗೆ ನಿನ್ನ ಹೆಂಡತಿಯ ಮರ್ಯಾದೆ ಉಳಿಯಬೇಕೆಂದರೆ, ೭ ಲಕ್ಷ ರೂಪಾಯಿ ನೀಡಿ, ಮರ್ಯಾದೆ ಉಳಿಸಿಕೋ ಎಂದು  ಬ್ಯಾಕ್‌ಮೇಲ್ ಮಾಡಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದು, ದುಡ್ಡು ನೀಡದಿದ್ದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ  ಆರೋಪಿಸಿದ್ದಾಳೆ.
ಪ್ರಶಾಂತ ಭಟ್ ಮಾಣಿಲ ವಿರುದ್ಧ ಸದ್ಯ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376,376(N), 504,506,503,384 ಮತ್ತು IT Act 2008ರ 67(A) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!