Ad Widget

ಗ್ಯಾರಂಟಿ ಜಾರಿ ಬೆನ್ನಲ್ಲೆ ರಾಜ್ಯದಲ್ಲಿ ಅಭಿವೃದ್ಧಿಗೆ ಬರ – ಪ್ರತಾಪಸಿಂಹ ನಾಯಕ್

ಬಿಜೆಪಿ ಸರಕಾರ ರಾಜ್ಯದ ರೈತರಿಗೆ, ವಿದ್ಯಾರ್ಥಿಗಳಿಗೆ, ಜನರಿಗಾಗಿ ಸುಮಾರು ೧೮ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಆದರೆ ಈಗ ರಾಜ್ಯದ ಕಾಂಗ್ರೆಸ್ ಸರಕಾರ ಅದನ್ನು ಹಿಂಪಡೆದು ಜನರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಸರಕಾರದ ವಿರುದ್ಧ ಸೆ.೧೧ ರಂದು ಸುಳ್ಯ ತಾಲೂಕು ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.

ಸೆ.೯ ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮತಾನಾಡುತ್ತಾ ಬಿಜೆಪಿ ಸರಕಾರ ರಾಜ್ಯದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಪಿ.ಎಂ. ಕಿಸಾನ್ ಯೋಜನೆ ಯಲ್ಲಿ ವರ್ಷಕ್ಕೆ ೬ ಸಾವಿರ ನೀಡುವಾಗ ರಾಜ್ಯ ಸರಕಾರ ೪ ಸಾವಿರ ನೀಡುತಿತ್ತು. ಆದರೆ ಈಗಿನ ಸರಕಾರ ರಾಜ್ಯ ನೀಡುತ್ತಿದ್ದ ಹಣವನ್ನು ತಡೆದಿದೆ. ರೈತ ವಿದ್ಯಾರ್ಥಿ ನಿಧಿಯನ್ನು ಸೇರಿದಂತೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ೧೮ ಕಾರ್ಯಕ್ರಮವನ್ನು ತಡೆಯಲು ಯತ್ನಿಸಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಕೆಲಸ ಕಾರ್ಯಗಳು ಪಕ್ಷದೊಳಗೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಬೂತ್ ಮಟ್ಟದ ವರೆಗೆ ಪಕ್ಷ ಸಂಘಟನಾತ್ಮಕಗೊಳಿಸುವ ನಿಟ್ಟಿನಲ್ಲಿ ಸಭೆಗಳು ನಡೆದಿದೆ. ನಮಗೆ ವಿಶ್ವಾಸ ಇದೆ. ಕಳೆದ ೯ ವರ್ಷದಲ್ಲಿ ಕೇಂದ್ರ ಸರಕಾರದ ಸಾಧನೆಯನ್ನು ದೇಶದ ಜನರು ಮೆಚ್ಚಿದ್ದಾರೆ. ಮೋದಿಯವರ ಸರಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬೆಳಕು ತರುವಂತ ಯೋಜನೆಯನ್ನು ನೀಡಿದೆ. ಆದ್ದರಿಂದ ಮೂರನೇ ಅವಧಿಯಲ್ಲಿಯೂ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೇ ಈ ನಿಟ್ಟಿನಲ್ಲಿ ನಮ್ಮ ಚುನಾವಣಾ ತಯಾರಿಗಳು ನಡೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ೧೦೦ ದಿನಗಳಾಗಿವೆ. ೫ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಆಸೆ ಹುಟ್ಟಿಸಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಮಳೆಯ ಕಾರಣದಿಂದ ಬರ ಒಂದೆಡೆಯಾದರೆ, ಗ್ಯಾರಂಟಿ ಜಾರಿ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಅನುದಾನವನ್ನು ನೀಡದೆ ಅಭಿವೃದ್ಧಿಯ ಬರವನ್ನು ರಾಜ್ಯ ಎದುರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ೫ ಗ್ಯಾರಂಟಿಯಲ್ಲಿ ಇನ್ನೂ ಕೂಡಾ ಯುವ ಜನರಿಗೆ ನೀಡಿದ ಘೋಷಣೆಯನ್ನು ಜಾರಿ ಮಾಡಿಲ್ಲ, ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇಟ್ಟ ೧೧ ಸಾವಿರ ಕೋಟಿ ರೂ ವನ್ನು ಕೂಡಾ ಗ್ಯಾರಂಟಿಗಾಗಿ ಬಳಕೆ ಮಾಡಿ ಆ ಸಮಾಜಕ್ಕೂ ಅನ್ಯಾಯ ಮಾಡಿದೆ ಎಂದು ಹೇಳಿದರು. ೨೦೦ ಯುನಿಟ್ ವಿದ್ಯುತ್ ಕೊಡುತ್ತೇವೆ ಎಂದಿದ್ದಾರೆ ಆದರೆ ರಾಜ್ಯದಲ್ಲಿ ಕೇವಲ ಸರಾಸರಿಯಾಗಿ ೬೦ ಯುನಿಟ್ ಗಳನ್ನು ನೀಡುತ್ತಿದೆ ಅಲ್ಲದೇ ಕಾಂಗ್ರೆಸ್ ಸರಕಾರ ವಿದ್ಯುತ್ ಉತ್ಪಾದನೆಯ ಕುರಿತು ಯೋಚಿಸದೆ ಈಗಲೇ ಲೋಡ್ ಶೆಡ್ಡಿಂಗ್ ಆರಂಭ ಮಾಡಿದ್ದಾರೆ. ದಿನಕ್ಕೆ ೩ ಗಂಟೆ ವಿದ್ಯುತ್ ನೀಡಲೂ ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಿಡಿ ಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ , ರಾಧಾಕೃಷ್ಣ ಬೂಡಿಯಾರು , ಸುಬೋದ್ ಶೆಟ್ಟಿ ಮೇನಾಲ , ಕಸ್ತೂರಿ ಪಂಜ , ರಾಕೇಶ್ ರೈ ಕೆಡೆಂಜಿ , ದೇವದಾಸ್ ಶೆಟ್ಟಿ ಬಂಟ್ವಾಳ , ಕೃಷ್ಣ ಶೆಟ್ಟಿ ಕಡಬ , ದಿನೇಶ್ ಬೆಳ್ಳಾರೆ , ಅಭಿಷೇಕ್ ಮೂಡಬಿದ್ರೆ , ರಮೇಶ್ ಕಲ್ಪುರೆ , ಸುರೇಶ್ , ಮಹೇಶ್ ರೈ ಮೇನಾಲ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!