ಸುಳ್ಯ ತಾಲೂಕಿನ ಶಾಲೆಗಳಲ್ಲೆ ಏಕೈಕ ಮಳೆ ಮಾಪನ ಇರುವ ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ಮಕ್ಕಳಿಗೆ ಪ್ರತಿ ದಿನ ಹವಾಮಾನ ಮಾಹಿತಿ ನೀಡಲಾಗುತ್ತದೆ.
ಪ್ರತಿ ದಿನ ಮಕ್ಕಳು ಬೆಳಗ್ಗೆ 9.00ರಿಂದ ಮರುದಿನ 9.00ಗಂಟೆ ವರೆಗೆ ಬೀಳುವ ಮಳೆ ಪ್ರಮಾಣವನ್ನು ಅಳತೆ ಮಾಡಿ ದಾಖಲಿಸುತ್ತಾರೆ. ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ ಪಿ.ಜಿ. ಎಸ್. ಎನ್ ಪ್ರಸಾದ್ ರವರು ಕಳೆದ 45ವರ್ಷಗಳಿಂದಲೂ ಪ್ರತಿ ದಿನ ಹವಾಮಾನ ವರದಿ ದಾಖಲಿಸಿಕೊಂಡು ಬರುತ್ತಿರುವ ಜಿಲ್ಲೆಯ ಏಕೈಕ ವ್ಯಕ್ತಿಯಾಗಿದ್ದಾರೆ. ಇದೀಗ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಇದರ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ. ಮೊಬೈಲ್ ಯುಗದಲ್ಲೂ ಇಂಥಹ ಅರ್ಥಪೂರ್ಣ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಜಿಲ್ಲೆಯಲ್ಲೇ ಅಪರೂಪದ ಶಾಲೆ ಇದಾಗಿದೆ. ಇಂತಹ ಹವ್ಯಾಸಗಳನ್ನು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಅಳವಡಿಸಿಕೊಳ್ಳುವಂತಾಗಲಿ ಎಂಬುದೇ ನಮ್ಮ ಆಶಯ.