Ad Widget

ಸುಳ್ಯ ಶಾಖೆಯಲ್ಲಿ ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ

ಸುಳ್ಯ : ಕ್ಯಾಂಪ್ಕೋ ಸಂಸ್ಥೆ ಸುಳ್ಯ ಶಾಖೆಯಲ್ಲಿ ಇಂದು ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪನಾ ದಿನಾಚರಣೆ ಅಂಗವಾಗಿ ನಿರ್ದೇಶಕರು, ಸದಸ್ಯ ಬೆಳೆಗಾರರು, ಸಿಬ್ಬಂದಿ ವರ್ಗದವರು ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷರಾದ ದಿವಂಗತ ವಾರಣಾಸಿ ಸುಬ್ರಾಯ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಕ್ಯಾಂಪ್ಕೋ ಬೆಳೆದು ಬಂದ ಹಾದಿ, ಸಂಸ್ಥೆ ಗೆ ಸದಸ್ಯ ಬೆಳೆಗಾರರ ಕೊಡುಗೆ ಹಾಗೂ ಸಿಬ್ಬಂದಿ ವರ್ಗದವರು ಕ್ಯಾಂಪ್ಕೋದ ಉನ್ನತಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದರ ಕುರಿತಾಗಿ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಖಾಧಿಕಾರಿ ಕುಂಞoಬು, ಸಿಬ್ಬಂದಿ ವರ್ಗ ಹಾಗೂ ಸದಸ್ಯ ಬೆಳೆಗಾರರಾದ ಮರಿಯಪ್ಪ ಭಟ್, ಗೋಪಾಲಕೃಷ್ಣ ಗೌಡ, ಗಣೇಶ್ ಭಟ್ ಉಪಸ್ಥಿತರಿದ್ದರು. ಆಗಮಿಸಿದ ಎಲ್ಲರಿಗೂ ಕ್ಯಾಂಪ್ಕೋ ಚಾಕಲೇಟ್ ನೀಡಲಾಯಿತು.ಸಿಬ್ಬಂದಿ ಶ್ರೀಮತಿ ಮಲ್ಲಿಕಾ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!