
ಸುಳ್ಯ ಪೋಲೀಸ್ ಠಾಣೆಗೆ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮಿಸಿದ್ದಾರೆ ಈ ಹಿಂದೆ ಸುಳ್ಯ ಠಾಣೆಯಲ್ಲಿ ರತನ್ ಕುಮಾರ್ ರವರು ಕ್ರೈಮ್ ಎಸೈ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ವಿಟ್ಲ ಠಾಣೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆಗೆ ನೂತನ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮಿಸಿದ್ದಾರೆ ಇವರು ಮೂಲತಃ ಕುಶಾಲನಗರದವರಾಗಿದ್ದು 2019-20 ರಲ್ಲಿ ಪಿ ಎಸೈ ಆಗಿ ಆಯ್ಕೆಯಾಗಿ ಮೈಸೂರಿನಲ್ಲಿ ಪೋಲೀಸ್ ಮೂಲ ತರಬೇತಿ ಪಡೆದು ಸುಳ್ಯದಲ್ಲಿ ಪ್ರೋಭೆಷನರಿ ಪಿ ಎಸೈ ಆಗಿ ಕಾರ್ಯನಿರ್ವಹಿಸಿ ನಂತರ ಪುತ್ತೂರು ನಗರ ಠಾಣೆಯಲ್ಲಿ ಕ್ರೈಮ್ ಎಸೈ ಆಗಿ ಮೂರು ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಇದೀಗ ಸುಳ್ಯಕ್ಕೆ ಮತ್ತೆ ಕ್ರೈಮ್ ಎಸೈ ಆಗಿ ಸುಳ್ಯ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದರು.