
ಸುಳ್ಯ ತಾಲೂಕಿನ ಅಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಎಲ್ ಮಾದರಿಯ ಅಡಿಕೆ ಮರದ ಪಾಲದಲ್ಲಿ ನಡೆದುಕೊಂಡು ಬರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾದ ಮಾಹಿತಿ ಪ್ರಕಾರ ಕಳೆದ ಮೂರು ದಿನಗಳಿಂದ ತಾಲೂಕು ಆಡಳಿತ ಸತತವಾಗಿ ಕಾರ್ಯಚರಣೆ ನಡೆಸುತ್ತಿದೆಯಾದರು ಇಂದು ಸಂಜೆಯ ವೇಳೆಗೆ ಪೇರಾಜೆ ತನಕ ಬಂದು ಹುಡುಕಿದರು ಸಿಗದೇ ಇದ್ದು ಈ ಪ್ರಕರಣ ಇನ್ನಷ್ಟು ಜಟಿಲವಾಗಿದೆ .

ಎ ಎಸೈ ತಾರನಾಥ್ ಜೊತೆ ವಿಖಾಯ ಸದಸ್ಯರು.
ಇತ್ತ ಮುಳುಗು ತಜ್ಞರ ಪ್ರಕಾರ ಇಂದು ಸಿಗಬೇಕಿತ್ತು , ಆದರೆ ನೀರಿನಲ್ಲಿ ಕಳೆದ ಮರುಳು ಮಿಶ್ರಿತನೀರು ಹಾಗೂ ನೀರು ಬಹಳಷ್ಟು ತಂಪಾಗಿರುವ ಕಾರಣ ದೇಹವು ಊದಿಕೊಳ್ಳದೇ ಇದ್ದರೆ ಈ ರೀತಿ ಆಗಬಹುದು ಅಥವಾ ಅದು ಯಾವುದಾದರು ದಿಮ್ಮಿ , ಕೋಲುಗಳಲ್ಲಿ ಸಿಲುಕಿದರೆ ಈ ರೀತಿ ಆಗಬಹುದು ಎಂದು ಅಂದಾಜಿಸಲಾಗುತ್ತಿದ್ದು ನೀರಿನ ಪ್ರಮಾಣ ಕಡಿಮೆ ಆದಲ್ಲಿ ಹುಡುಕುವುದು ಸುಲಭವಾಗಬಹುದು ಎಂದು ಎಸ್ ಡಿ ಆರ್ ಫ್ ತಂಡದ ಶೀನ ನಾಯ್ಕ ಹೇಳಿದ್ದಾರೆ . ಇತ್ತ ಪೋಲೀಸ್ ಅಧಿಕಾರಿಗಳ ನೆರವಿಗೆ ಬರುವ ಸಮಾಜ ಸೇವಕರ ತಂಡವು ಇದೇ ರೀತಿಯಲ್ಲಿ ಹೇಳುತ್ತಿದ್ದು ಅವರು ಕೂಡಾ ಅಲ್ಲೆ ಬೀಡು ಬಿಟ್ಟಿದ್ದು ಅವರ ಜೊತೆಗೆ ಎ ಎಸೈ ತಾರನಾಥ್ ಕೂಡಾ ಇದ್ದು ಇವರೆಲ್ಲರ ಪರಿಶ್ರಮವಿದ್ದರು ಇಂದು ಕೂಡ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ಮತ್ತೆ ನಾಳೆ ಮುಂಜಾನೆಯಿಂದ ಕಾರ್ಯಚರಣೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಕಾರ್ಯಚರಣೆಯಲ್ಲಿ ಭಾಗಿಯಾದ SDRF ತಂಡ.