Ad Widget

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು ಬೆಳ್ಳಾರೆ ರಸ್ತೆಯಲ್ಲೇ ಎನ್ ಕೌಂಟರ್ ಮಾಡಿ – ಅರುಣ್ ಕುಮಾರ್ ಪುತ್ತಿಲ ಆಗ್ರಹ

ಬೆಳ್ಳಾರೆಯ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗದ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜು.2ರಂದು ನಡೆಯಿತು.

. . . . . . .

ಅಯೋಧ್ಯೆ ಕರಸೇವೆಯಲ್ಲಿ ಬಲಿದಾನಗೈದ ಕೊಠಾರಿ ಸಹೋದರ ಶೇಷಪ್ಪ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಣ್ಣಾ ವಿನಯಚಂದ್ರ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯ ಕೇಂದ್ರ ಬಿಂದುವಾಗಿ ಆಗಮಿಸಿದ್ದ ಅರುಣ್ ಕುಮಾರ್ ಪುತ್ತಿಲ ಸಭೆಯನ್ನು ಉದ್ದೇಶಿಸಿ ಮಾತನಾಡಿ ” ನಮ್ಮ ಯುವ ಜನತೆಗೆ ಯಾವುದೋ ಒಂದು ಸಮಸ್ಯೆ ಎದುರಾದಾಗ ಅತ್ಯಂತ ಕಠಿಣ ನಿರ್ಧಾರಕ್ಕೆ ಬಂದು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ, ಇದು ತಪ್ಪು ಯಾವುದೇ ಸಮಸ್ಯೆಗಳು ಬಂದಾಗ ಅದನ್ನು ಧೈರ್ಯದಿಂದ ಎದುರಿಸಬೇಕಾಗಿದೆ. ಸಮಸ್ಯೆಯನ್ನು ಮೆಟ್ಟಿನಿಲ್ಲಬೇಕು ಎಂದು ಅವರು ಯುವ ಜನತೆಗೆ ಕಿವಿಮಾತು ನೀಡಿದರು. ಇತ್ತ ದೇಶದಲ್ಲೆ ಸಂಚಲನ ಮೂಡಿಸಿದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಶರಣಾಗತಿಗೆ ಕಳೆದ ತಿಂಗಳ ಮೂವತ್ತರವರೆಗೆ ಎನ್ ಐ ಎ ನ್ಯಾಯಾಲಯ ಅವಕಾಶ ನೀಡಿತ್ತು. ಶರಣಾಗದ ಪಕ್ಷದಲ್ಲಿ ಮನೆ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದ್ದರು ಅದರಂತೆ ಅವಧಿಯು ಮುಕ್ತಾಯವಾಗಿದ್ದು ಅವರ ವಿರುದ್ದ ಆದಷ್ಟು ಬೇಗ ಕ್ರಮ ಜರುಗಿಸಬೇಕು ಹಾಗೆಯೇ ಪ್ರವೀಣ್ ಹತ್ಯೆಯ 11 ಆರೋಪಿಗಳನ್ನು ಬೆಳ್ಳಾರೆಯ ರಸ್ತೆಯಲ್ಲೆ ಎನ್ ಕೌಂಟರ್ ಮಾಡಬೇಕು ಎಂದರು. ಹಿಂದುಗಳ ಒಗ್ಗಟ್ಟನ್ನು ಮುರಿಯಲು ಹಾಗೂ ಕಾರ್ಯಕರ್ತರ ಧೃತಿಗೆಡಿಸಲು ಕೆಲವರು ಪ್ರಯತ್ನಿಸುತ್ತಿದ್ದು ಅಂತವರ ವಿರುದ್ದ ನಾನು ಸಾಮಾನ್ಯ ಕಾರ್ಯಕರ್ತನಾಗಿ ಬೆಳ್ಳಾರೆಯ ಹಿಂದು ಕಾರ್ಯಕರ್ತರ ಜೊತೆಗೆ ನಿಲ್ಲುತ್ತೇನೆ ಎಂದರು. ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಣ್ಣಾ ವಿನಯಚಂದ್ರ, ನಾರಾಯಣ ಆಚಾರ್, ಮನೋಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಳೆಯ ನಡುವೆಯೂ ಆಕರ್ಷಕ ಮೆರವಣಿಗೆ

ಬೆಳ್ಳಾರೆಯ ರಸ್ತೆಯಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಇಕ್ಕೆಲಗಳಲ್ಲಿ ನಿಂತಿದ್ದ ಜನತೆಗೆ ಕೈ ಮುಗಿಯುತ್ತ ಮಳೆಯಲ್ಲಿಯೇ ಸಾಗಿದರು. ಸಿಂಗಾರಿ ಮೇಳ , ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು. ಮೆರವಣಿಗೆಯಲ್ಲಿ ಸುಳ್ಯ ತಾಲೂಕಿನ ನಾನಾ ಕಡೆಗಳ ಅಭಿಮಾನಿಗಳು, ಹಿಂದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!