
ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ಶ್ರೀ ವೇದವ್ಯಾಸ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳ ಯಕ್ಷಗಾನ ನಾಟ್ಯ ತರಗತಿ ಇಂದು ಉದ್ಘಾಟನೆಗೊಂಡಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಬಿಳಿನೆಲೆ ಇಲ್ಲಿಯ ಅರ್ಚಕರಾದ ವೆಂಕಟೇಶ್ವರ ಭಟ್ ಇವರು ದೀಪ ಬೆಳಗಿಸಿ ತರಗತಿಯನ್ನು ಉದ್ಘಾಟಿಸಿದರು. ಯಕ್ಷಗಾನ ತರಗತಿಯ ಗುರುಗಳಾಗಿ ಪ್ರಖ್ಯಾತ ವೇಷಧಾರಿಯಾದ ಈಶ್ವರ ಪ್ರಸಾದ್ ನಿಡ್ಲೆಯವರು ಯಕ್ಷಗಾನ, ಯಕ್ಷಗಾನ ತರಗತಿಯ ಬಗ್ಗೆ ತಿಳಿಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಶರ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯಗುರುಗಳಾದ ಸತ್ಯಶಂಕರ್ ಸ್ವಾಗತಿಸಿ, ವೇದವ್ಯಾಸ ವಿದ್ಯಾಲಯದ ಮುಖ್ಯಗುರುಗಳಾದ ಪ್ರಶಾಂತ್ ಕೆ ವಂದಿಸಿದರು. ಸಹ ಶಿಕ್ಷಕರಾದ ಮಹಾಬಲೇಶ್ವರ ಕಾರ್ತಿಕ್ ನಿರೂಪಿಸಿದರು. ಸಂಸ್ಥೆಯ 60 ವಿದ್ಯಾರ್ಥಿಗಳು ತರಗತಿಗೆ ಸೇರ್ಪಡೆಗೊಂಡರು.