Ad Widget

ಸುಳ್ಯದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ – 40% ಕಮಿಷನ್ ಸರ್ಕಾರ ತೊಲಗಿಸಲು ಮಲ್ಲಿಕಾರ್ಜುನ ಖರ್ಗೆ ಕರೆ

ರಾಜ್ಯದಲ್ಲಿ ಈಗಿರುವ 40% ಕಮಿಷನ್ ಸರ್ಕಾರವನ್ನು ತೆಗೆದು ಜನಪರವಾದ ಕಾಂಗ್ರೆಸ್ ಸರಕಾರವನ್ನು ಆಡಳಿತಕ್ಕೆ ತರಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾಂಗ್ರೆಸ್ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕೃಷ್ಣಪ್ಪ ಜಿ ಯವರ ಪರವಾಗಿ ಪ್ರಚಾರ ಕಾರ್ಯಕ್ಕೆ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸುಳ್ಯದಲ್ಲಿ ಬಡವರ ಕಲಿಕೆಗಾಗಿ ಮೆಡಿಕಲ್ ಕಾಲೇಜು ತೆರೆಯುತ್ತೇವೆ,ಈ ಭಾಗದ ಅಡಿಕೆ ಬೆಳೆಗಾರರ ಸಮಸ್ಯೆಯಾದ ಅಡಿಕೆ ಎಲೆ ಹಳದಿ, ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ 100 ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟು ಬೆಳೆಗಾರ ರಕ್ಷಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ, ಈ ರೋಗದ ಬಗ್ಗೆ ಅಧ್ಯಯನ ನಡೆಸಿ ಅಡಿಕೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಮಾಡಲು ಕಾಂಗ್ರೆಸ್ ಸರಕಾರ ಯೋಚಿಸಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಒಗ್ಗಟಾಗಿ ಕೆಲಸ ನಿರ್ವಹಿಸಿ, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ತರುವ ಕೆಲಸವನ್ನು ನೀವೆಲ್ಲಾ ಮಾಡಬೇಕಾಗಿದೆ. ದಕ್ಷಿಣ ಕನ್ನಡದ ಹೆಮ್ಮೆಯ ಬ್ಯಾಂಕ್ ಅತ್ಯುತ್ತಮ ವ್ಯವಹಾರ ನಡೆಸುತ್ತಿದ್ದ ವಿಜಯಾ ಬ್ಯಾಂಕ್ ಅನ್ನು ಗುಜಾರಾತ್ ನ ಬಡ ಬರೋಡ ಬ್ಯಾಂಕ್ ಜೊತೆ ವಿಲೀನ ನಡೆಸಿರುವುದು ಕನ್ನಡಿಗರಿಗೆ ನಡೆಸಿದ ಅವಮಾನವಾಗಿದೆ. ಪರಸ್ಪರ ಜಗಳ ಮಾಡಿಸಿ ಕೋಮು ದ್ವೇಷ ಹರಡಿಸಿ, ಸಮುದಾಯಗಳ ನಡುವಿನ ಸಾಮರಸ್ಯ ವನ್ನು ಒಡೆದು ಆಳುತ್ತಿರುವ ಬಿಜೆಪಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಏನೂ ಕೊಡುಗೆ ಸಿಗಲಿಲ್ಲ, ಕಾಂಗ್ರೆಸ್ ನ ಈ ಬಾರಿಯ ಗ್ಯಾರಂಟಿ ನಮ್ಮ ಪ್ರಣಾಳಿಕೆಯಾಗಿದ್ದು, ನಮ್ಮ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ಗೃಹಜ್ಯೋತಿ ಯೋಜನೆಯಂತೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್,ಗೃಹ ಲಕ್ಷ್ಮಿಯೊಜನೆಯಂತೆ ಪ್ರತೀ ಮಹಿಳೆಯರಿಗೆ ತಿಂಗಳಿಗೆ 2000 ದಂತೆ ವರ್ಷಕ್ಕೆ 24000 , ಅನ್ನಬಾಗ್ಯ ಯೋಜನೆಯಲ್ಲಿ ಪ್ರತೀ ವ್ಯಕ್ತಿಗೆ ತಿಂಗಳಿಗೆ ಉಚಿತ 10 ಕೆ ಜಿ ಅಕ್ಕಿ ವಿತರಣೆ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ಸಾವಿರ, ಡಿಪ್ಲೊಮ ಆದವರಿಗೆ 1500 ಪ್ರತೀ ತಿಂಗಳು ನೀಡುವ ಗ್ಯಾರಂಟಿ ನೀಡುತ್ತಿದ್ದೇವೆ. ಕಾಂಗ್ರೆಸ್ ನಲ್ಲಿ ಯಾರೆ ಮುಖ್ಯ ಮಂತ್ರಿಯಾದರು ಈ ಯೋಜನೆ ಖಂಡಿತವಾಗಿ ಜನರಿಗೆ ದೊರೆಯಲಿದೆ ಹಾಗಾಗಿ ಮತದಾರರು ಕಾಂಗ್ರೆಸ್ ಗೆಲುವಿಗೆ ಕಾರಣವಾಗ ಬೇಕಾಗಿದೆ ಎಂದರು.
ಖರ್ಗೆ ಭಾಷಣ ಮಾಡಿ ಮುಗಿಸುತ್ತಿದ್ದಂತೆ ಮಳೆಯ ಹನಿ ಜಿನುಗಲಾರಂಭಿಸಿತು,ಕೂಡಲೇ ಮಲ್ಲಿಕಾರ್ಜುನ ಖರ್ಗೆ ಇದು ಕಾಂಗ್ರೆಸ್ ಗೆಲುವಿನ ಶುಭ ಸೂಚನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ಸ್ವಾಗತಿಸಿದರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ನಿರೂಪಣೆ ಮಾಡಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಸುಳ್ಯ ಕೆಪಿಸಿಸಿ ಟಿ.ಎಂ.ಶಹೀದ್ ತೆಕ್ಕಿಲ್, ಪ್ರಧಾ‌ನ ಕಾರ್ಯದರ್ಶಿ ಪಿ.ಎಸ್.ಗಂಗಾಧರ,ಕಡಬ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಎಂ.ವೆಂಕಪ್ಪ ಗೌಡ, ಶೀಬಾ ರಾಮಚಂದ್ರನ್, ಶಾಲೆಟ್ ಪಿಂಟೋ, ಗೀತಾ ಕೋಲ್ಚಾರ್
ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ‌ ಮಾವಜಿ, ಕಾಂಗ್ರೆಸ್ ಮುಖಂಡರಾದ ಡಾ.ರಘು, ಮಹಮ್ಮದ್ ಮಸೂದ್, ಕೋಡಿಜಾಲ್ ಇಬ್ರಾಹಿಂ,ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್, ಸವಾದ್ ಎನ್ ಎಸ್ ಐ,ವ ಎಂ.ಎಸ್.ಮಹಮ್ಮದ್, ಲುಕ್ಮಾನ್ ಬಂಟ್ವಾಳ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ಸರಸ್ವತಿ ಕಾಮತ್, ವಹಿದಾ ಇಸ್ಮಾಯಿಲ್, ಕಾವು ಹೇಮನಾಥ ಶೆಟ್ಟಿ, ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್ ಎಸ್.ಸಂಶುದ್ದೀನ್, ರಾಜೀವಿ ಆರ್ ರೈ, ಪಿ.ಪಿ.ವರ್ಗೀಸ್ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!