Ad Widget

ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳು – 1848 ವಿದ್ಯಾರ್ಥಿಗಳು

. . . . . . .

2023ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.31ರಿಂದ ಆರಂಭಗೊಳ್ಳಲಿದೆ. ಈ ಬಾರಿ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 1848 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಸುಳ್ಯ ತಾಲೂಕಿನಲ್ಲಿ 36 ಪ್ರೌಢಶಾಲೆ ಗಳಿವೆ. ಇಲ್ಲಿಂದ ಒಟ್ಟು 1848 ವಿದ್ಯಾರ್ಥಿ ಗಳು ಈ ಬಾರೀ ಪರೀಕ್ಷೆ ಬರೆಯಲಿದ್ದಾರೆ. ಪುನಾರಾವರ್ತಿತ ವಿದ್ಯಾರ್ಥಿಗಳು 55 ಮಂದಿ ನೋಂದಾವಣೆ ಮಾಡಿದ್ದಾರೆ.
ಆದರೆ ಖಾಸಗಿಯಾಗಿ 50 ಮಂದಿ ಹಾಗೂ ಪುನರಾವರ್ತಿತ 6 ಮಂದಿ ಪರೀಕ್ಷೆ ಬರೆಯಲು ನೋಂದಾವಣೆ ಮಾಡಿದ್ದು ಅವರಿಗೆ ಪುತ್ತೂರು ಪರೀಕ್ಷಾ ಕೇಂದ್ರವಾಗಿರುತ್ತದೆ.
6 ಪರೀಕ್ಷಾ ಕೇಂದ್ರಗಳು: ಈ ಬಾರೀ ತಾಲೂಕಿನಲ್ಲಿ 6 ಎಸ್‌ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ೪೦೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಇಲ್ಲಿಯ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು ಹಾಗೂ ಉಪ ಮುಖ್ಯ ಅಧೀಕ್ಷಕರಾಗಿ ಗಾಂಧಿನಗರ ಕೆ.ಪಿ.ಎಸ್. ಸಹ ಶಿಕ್ಷಕ ಚಿನ್ನಪ್ಪ ಗೌಡ ಪತ್ತುಕುಂಜ ಕಾರ್ಯ ನಿರ್ವಹಿಸಲಿದ್ದಾರೆ.
ಗಾಂಧಿನಗರ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿ ೨೧೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇಲ್ಲಿಯ ಮುಖ್ಯ ಅಧೀಕ್ಷಕರಾಗಿ ಗಾಂಧಿನಗರ ಕಾಲೇಜಿನ ಹಿರಿಯ ಸಹ ಶಿಕ್ಷಕ ಅರುಣ್ ಕುಮಾರ್ ರನ್ನು ನೇಮಕಗೊಳಿಸಲಾಗಿದೆ. ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೨೬೦ ಮಂದಿ ಪರೀಕ್ಷೆ ಬರೆಯಲಿದ್ದು, ಇಲ್ಲಿ ಅಜ್ಜಾವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋಪಿನಾಥ ಮೆತ್ತಡ್ಕ ಮುಖ್ಯ ಅಧೀಕ್ಷಕರಾಗಿರುತ್ತಾರೆ. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ೩೪೬ ಮಂದಿ ಪರೀಕ್ಷೆ ಬರೆಯಲಿದ್ದು ಕಾಲೇಜಿನ ಉಪ ಪ್ರಾಂಶುಪಾಲೆ ಉಮಾ ಕುಮಾರಿ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುವರು. ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನಲ್ಲಿ ೪೨೬ ಮಂದಿ ಪರೀಕ್ಷೆ ಬರೆಯಲಿದ್ದು ಇಲ್ಲಿ ಮುಖ್ಯ ಶಿಕ್ಷಕ ಯಶವಂತ ರೈಯವರು ಮುಖ್ಯ ಅಧೀಕ್ಷಕರಾಗಿ ಹಾಗೂ ಉಪ ಮುಖ್ಯ ಅಧೀಕ್ಷಕರಾಗಿ ಎಡಮಂಗಲ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಕಜ್ಜೋಡಿ ಕಾರ್ಯ ನಿರ್ವಹಿಸುವರು. ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ೧೯೪ ಮಂದಿ ಪರೀಕ್ಷೆ ಬರೆಯಲಿದ್ದು ಅರಂತೋಡು ಪ.ಪೂ. ಕಾಲೇಜಿನ ಮುಖ್ಯ ಶಿಕ್ಷಕ ಸೀತಾರಾಮರು ಮುಖ್ಯ ಅಧೀಕ್ಷಕರಾಗಿರುತ್ತಾರೆ.

1 ಕೊಠಡಿಯಲ್ಲಿ 24 ವಿದ್ಯಾರ್ಥಿಗಳು
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಒಂದು ಕೊಠಡಿಯಲ್ಲಿ ೨೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗ್ಗೆ ೧೦.೩೦ಕ್ಕೆ ಪರೀಕ್ಷೆ ಆರಂಭಗೊಳ್ಳುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹಾಗೂ ತಾಲೂಕಿನ ಪರೀಕ್ಷಾ ನೋಡೆಲ್ ಆಗಿರುವ ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ ಪುರುಷೋತ್ತಮ ಕಿರ್ಲಾಯರವರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಉಪ ಮುಖ್ಯಾಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಸ್ಥಾನಿಕ ನಿರೀಕ್ಷಕರು, ಮೊಬೈಲ್ ಸ್ವಾಧೀನಾಧಿಕಾರಿಗಳು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು ಇರುತ್ತಾರೆ.

ಹಾಲ್‌ಟಿಕೆಟ್ ಕಡ್ಡಾಯ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಹಾಲ್ ಟಿಕೇಟ್ ಕಡ್ಡಾಯವಾಗಿ ತರಬೇಕು. ಒಂದು ವೇಳೆ ಮರೆತು ಹೋದರೂ ಪರೀಕ್ಷಾ ಕೇಂದ್ರದಲ್ಲಿ ಚಿಂತೆ ಮಾಡಬೇಕಾಗಿಲ್ಲ. ಅಂತವರು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಭೇಟಿಯಾಗಬಹುದು. ಬಳಿಕ ಆ ಪರೀಕ್ಷಾ ಕೇಂದ್ರದಲ್ಲಿ ಆ ವಿದ್ಯಾರ್ಥಿಯ ಹಾಲ್ ಟಿಕೇಟ್ ನೋಂದಾವಣೆ ಸಂಖ್ಯೆಯನ್ನು ಪರಿಶೀಲಿಸಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಬಸ್‌ನಲ್ಲಿ ಬರುವ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಹಾಲ್ ಟಿಕೆಟ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರವೇಶ ಮಾಡಬಹುದು.

ಮಾ.31: ಪ್ರಥಮ ಭಾಷೆ
ಎ.3 : ಗಣಿತ
ಎ.6: ದ್ವಿತೀಯ ಭಾಷೆ
ಎ.10: ವಿಜ್ಞಾನ
ಎ.12 : ತೃತೀಯ ಭಾಷೆ
ಎ.15 : ಸಮಾಜ ವಿಜ್ಞಾನ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!