ನಾಲ್ಕೂರು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಪ್ರಸ್ತಾಪಗೊಂಡು ಮರುವಶಕ್ಕೆ ಆದೇಶ ನೀಡಿದ್ದ ಸರ್ಕಾರಿ ಜಾಗದ ಅತಿಕ್ರಮಣ ಶುಕ್ರವಾರ ಕಂದಾಯ ಇಲಾಖೆ ತೆರವು ಮಾಡಿದೆ.
ನಾಲ್ಕೂರಿನ ಉಜಿರಡ್ಕ ಎಂಬಲ್ಲಿ ಸುಮಾರು 4ಎಕ್ರೆ ಸರ್ಕಾರಿ ಜಾಗವನ್ನು ಮನುದೇವ ಪರಮಲೆ ಎಂಬವರು ಅತಿಕ್ರಮಣ ಮಾಡಿ ಅಡಿಕೆ ಕೃಷಿ ಮಾಡಿದ್ದರು. ಈ ಬಗ್ಗೆ ನಾಲ್ಕೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರಸ್ತಾಪಗೊಂಡಿದ್ದು ಸರಕಾರಿ ಜಾಗಗಳ ಅತಿಕ್ರಮಣ ತೆರವು ಮಾಡುವಂತೆ ಆದೇಶ ಮಾಡಿದ್ದರು. ಅದರಂತೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿದ್ದು 4 ಎಕ್ರೆ ಜಾಗ ಮರುವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಂದಾಯ ನೀರಿಕ್ಷಕರಾದ ಚಂದ್ರ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಭಾರತಿ, ಮಧು, ಗ್ರಾ.ಪಂ ಸದಸ್ಯರುಗಳಾದ ವಿಜಯ ಚಾರ್ಮತ, ಹರೀಶ್ ಕೊಯಿಲ, ಭಾರತಿ ಎರ್ದಡ್ಕ, ಲೀಲಾವತಿ ಅಂಜೇರಿ, ಗ್ರಾಮ ಸಹಾಯಕ ಮಿಥುನ್ ಹಾಗೂ ಪೊಲೀಸ್ ಇಲಾಖೆ, ಮೆಸ್ಕಾಂನವರು ಸೇರಿ ಅತಿಕ್ರಮಣ ತೆರವು ಮಾಡಿದ್ದಾಗಿ ತಿಳಿದುಬಂದಿದೆ.