ಗುತ್ತಿಗಾರಿನ ಬಾಕಿಲದ ಆನಂದ ರವರ ಪುತ್ರ ಗುತ್ತಿಗಾರು ಗ್ರಾ.ಪಂ.ಸದಸ್ಯ ಜಗದೀಶ್ ಮತ್ತು ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ಅಚ್ರಪ್ಪಾಡಿ ದಿ. ಜನಾರ್ಧನ ಅವರ ಪುತ್ರಿ ಪ್ರತಿಮಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತಿದ್ದರೆನ್ನಲಾಗಿದೆ. ಆದರೆ ಮದುವೆಗೆ ಹುಡುಗಿ ಕಡೆಯವರ ವಿರೋಧವಿತ್ತೆನ್ನಲಾಗಿದೆ. ಮನೆಯವರು ಬೇರೆ ಹುಡುಗನ ನೋಡುತ್ತಿದ್ದಾರೆಂದು ಮನೆ ಬಿಟ್ಟು ವರನೊಂದಿಗೆ ತೆರಳಿ ಮದುವೆಯಾಗಿ, ವಿವಾಹ ನೋಂದಣಿ ಮಾಡಿರುವುದಾಗಿ ತಿಳಿದು ಬಂದಿದೆ.
- Thursday
- November 21st, 2024