ನಾಲ್ಕೂರಿನ ಅರಣ್ಯ ಪ್ರದೇಶವಾದ ವಲ್ಪಾರೆ, ಚಾರ್ಮತ ಅರಣ್ಯ ಪ್ರದೇಶದ ವಡ್ಡೆತಮುಖ ಭಾಗದಲ್ಲಿ ಮತ್ತೆ ಬೀಕರ ಬೆಂಕಿ ಹತ್ತಿಕೊಂಡಿದೆ. ನಿನ್ನೆ ಮಧ್ಯಾಹ್ನ ಆಗುವಾಗ ಒಮ್ಮೆ ನಂದಿಸಲಾಗಿತ್ತಾದರೂ ರಾತ್ರಿಯಾಗುವಾಗ ಮತ್ತೆ ಉರಿಯಲಾಂಬಿಸಿದೆ. ರಾತ್ರಿ ಯಿಂದ ಆರಂಭವಾದ ಬೆಂಕಿ ಇಂದು ಉರಿಯುತ್ತಲೇ ಇದೆ. ಬೆಂಕಿಯ ಭೀಕರತೆಗೆ ಬಿಸಿ ಗಾಳಿ ಬೀಸುತ್ತಿದೆ. ಪಟಾಕಿಗೆ ಒಡೆದಂತೆ ಶಬ್ದ ಬರುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು, ವಿಪತ್ತು ಘಟಕದವರು, ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ.
- Thursday
- November 21st, 2024