Ad Widget

ವಿಧಾನಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಅಸಮಾಧಾನ ವಿಚಾರ ಮೀಸಲಾತಿ ರದ್ದುಗೊಳಿಸಿರುವುದು ಸರಕಾರದ ರಂಝಾನ್ ಕಿಟ್ : ಟಿ.ಎಂ. ಶಹೀದ್ ವ್ಯಂಗ್ಯ

. . . . . . .

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಗಳ ಆಯ್ಕೆ ವಿಚಾರದಲ್ಲಿ ಅಸಮಾಧಾನ ಸ್ವಾಭಾವಿಕ. ‌ಎಲ್ಲ ಕಡೆ ಇರುವಂತೆ ಇಲ್ಲಿಯೂ ಆಗಿದೆ.‌ ಅದನ್ನು ಪಕ್ಷದ ಹೈಕಮಾಂಡ್ ಸರಿಪಡಿಸುತ್ತದೆ” ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಎಂ. ಶಹೀದ್ ಹೇಳಿದ್ದಾರೆ.

ಮಾ.28 ರಂದು‌ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಪಕ್ಷ ಯಾರನ್ನು ಸೂಚಿಸುತ್ತದೆಯೋ ಅವರ ಪರ ನಾವು ಕೆಲಸ ಮಾಡುತ್ತೇವೆ. ಆದರೆ ಕೆಲವು ಸಂದರ್ಭ ಅಸಮಾಧಾನ ಇರುತ್ತದೆ. ‌ಅದನ್ನು ಪಕ್ಷದ ಹೈಕಮಾಂಡ್ ಸರಿಪಡಿಸುತ್ತದೆ. ಚುನಾವಣೆಯಲ್ಲಿ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಸುಳ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ. ಕಾಂಗ್ರೆಸ್ ಶಾಸಕರು ಬರುವುದು ಗ್ಯಾರಂಟಿ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದು ಶಹೀದ್ ಹೇಳಿದರು.

ರಾಹುಲ್ ಗಾಂಧಿ ಸದಸ್ಯತ್ವದ ಅನರ್ಹತೆ ಖಂಡನೀಯ
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದು ಮಾಡಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ವಿರೋಧ ಪಕ್ಷಗಳಿಗೆ ಉಳಿಗಾಲ ಇಲ್ಲ ಎಂಬುದನ್ನು ತೋರಿಸುತ್ತದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದ ಹಾಗೆ ಇದೆ ಎಂದು ಅವರು ಹೇಳಿದರು. ಯಾವುದಕ್ಕೂ ಹೆದರದೆ ರಾಹುಲ್ ಗಾಂಧಿಯವರು ಹೋರಾಟ ಮಾಡುವ ಕಾರಣ ಅವರ ಸದಸ್ಯತ್ವವನ್ನು ರದ್ದು ಪಡಿಸಿದ್ದಾರೆ ಎಂದರು. ಆಧಾರ್ ಕಾರ್ಡ್ ಮತ್ತು ಪಾನ್‌ ಕಾರ್ಡ್ ಜೋಡಣೆ ಮಾಡಲು ಒಂದು ಸಾವಿರ ಹಣ ಪಡೆಯುತ್ತಿರುವುದು ಕೇಂದ್ರ ಸರಕಾರ‌ ಬಡವರನ್ನೂ, ಜನ ಸಾಮಾನ್ಯರನ್ನೂ ಹಗಲು ದರೋಡೆ ಮಾಡುತ್ತಿರುವುಕ್ಕೆ ಉದಾಹರಣೆ ಎಂದು ಅರೊಪಿಸಿದರು.

ಮುಸ್ಲೀಂ ಸಮುದಾಯಕ್ಕೆ ಇದ್ದಂತಹಾ ರಾಜಕೀಯ, ಉದ್ಯೋಗ ಮೀಸಲಾತಿಯನ್ನು ರದ್ದು ಪಡಿಸುವ ಮೂಲಕ ರಾಜ್ಯ ಸರಕಾರ ಮುಸ್ಲೀಂ ಸಮುದಾಯಕ್ಕೆ ರಂಝಾನ್ ಗಿಪ್ಟ್ ನೀಡಿದೆ. ರಾಜಕೀಯವಾಗಿ, ಶಿಕ್ಷಣ,ಉದ್ಯೋಗದಲ್ಲಿ ಮುಸ್ಲೀಂ ಸಮುದಾಯವನ್ನು ಮೇಲಕ್ಕೆ ತರಲು ನೀಡುತ್ತಿದ್ದ ಮೀಸಲಾತಿಯನ್ನು ರದ್ದುಪಡಿಸಿರುವುದು ಖಂಡನೀಯ ಎಂದು ಅವರು ಹೇಳಿದರು.

ಭಾರತ್ ಜೋಡೋ ಯಶಸ್ಸು ಸಹಿಸದೆ ಅನರ್ಹ ಮಾಡಿದ್ದಾರೆ:ಮುಸ್ತಫ
ರಾಹುಲ್ ಗಾಂಧಿಯವರು ನಡೆಸಿದ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಸಹಿಸದೆ ಕೇಂದ್ರ ಸರಕಾರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿಸಿದೆ ಎಂದು ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಪಡಿಸಿರುವುದು ಖಂಡನೀಯ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬೂಸಾಲಿ, ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ಬ್ಲಾಕ್ ಅಲ್ಪ ಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷ ತಾಜುದ್ದೀನ್ ಅರಂತೋಡು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!