ರಂಗಮಯೂರಿಯಲ್ಲಿ ಎ.11 ರಿಂದ 18ರವರೆಗೆ ರಾಜ್ಯ ಮಟ್ಟದ ರಂಗಶೈ ಲಿಯ ಆಕರ್ಷಕ ಮಕ್ಕಳ ಬೇಸಿಗೆ ಶಿಬಿರವಾದ “ಬಣ್ಣ” ಕಾಯರ್ತೋಡಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಿರೂಪಣಾ ಕೌಶಲ್ಯ, ರಂಗ ತರಬೇತಿ, ನಾಟಕ ನಿರ್ಮಾಣ, ಸಾಹಿತ್ಯ, ಸಂಸ್ಕೃತಿ, ನೃತ್ಯ ತರಬೇತಿ, ಹಳ್ಳಿಮದ್ದು, ರಂಗ ಹೋಳಿ, ಗಾಳಿಪಟ ಉತ್ಸವ, ಯಕ್ಷಗಾನ ವೇಷಭೂಷಣ ಪ್ರಾತ್ಯಕ್ಷಿಕೆ, ರಂಗ ಸಂಗೀತ, ಹಾಡಿನ ಆಟ, ದೇಸಿ ಆಟಗಳು, ಜನಪದ ಕಲೆ, ಕೋಲಾಟ, ಮುಖ ವರ್ಣ, ಬಣ್ಣದ ಚಿತ್ತಾರ, ಪರಿಸರ ಶಿಕ್ಷಣ, ವ್ಯಕ್ತಿತ್ವ ವಿಕಸನದ ಪಾಠಗಳು, ಯೋಗ, ಭಜನೆಗಳನ್ನು ಹೇಳಿಕೊಡಲಾಗುವುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಎ.8. ಹೆಚ್ಚಿನ ಮಾಹಿತಿಗಾಗಿ ಶಶಿಕಾಂತ್ ಮಿತ್ತೂರು 8150827781, ಯಶ್ವಿತ್ ಕಾಳಮ್ಮನೆ 8147453575, ಶ್ರೀಮತಿ ಸೌಮ್ಯ ಆಲಂಕಲ್ಯ 83322938875, ಶ್ರೀಮತಿ ಸುನಂದ ಶೆಟ್ಟಿ 9481178541, ಶ್ರೀಮತಿ ಜಯಕೃಷ್ಣ 9481330121 ರನ್ನು ಸಂಪರ್ಕಿಸಿ. ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮೋಹನ್ ಶೇಣಿ ( ರಂಗ ನಿರ್ದೇಶಕರು, ಚಲನಚಿತ್ರ ನಟರು) ಮಹೇಶ್ ಆಚಾರಿ, ಹೊನ್ನಾವರ ( ರಾಜ್ಯ ಮಟ್ಟದ ರಂಗ ನಿರ್ದೇಶಕರು ಹಾಗೂ ರಂಗ ಶಿಕ್ಷಕರು, ರಂಗ ಅಧ್ಯಯನ ಕೇಂದ್ರ ಕುಂದಾಪುರ ) ವಿನೋದ್ ಕರ್ಕೇರ ( ಅಂತ ರಾಷ್ಟ್ರೀಯ ಮಟ್ಟದ ನೃತ್ಯ ಮತ್ತು ಫಿಟ್ನೆಸ್ ತರಬೇತುದಾರರು ಹಾಗೂ ಸ್ಥಾಪಕಾಧ್ಯಕ್ಷರು, ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಮೈಸೂರು) ಶುಭಕರ್ ಪುತ್ತೂರು ( ರಂಗ ನಿರ್ದೇಶಕರು, ಸಂಗೀತಾ ನಿರ್ದೇಶಕರು, ನೀನಾಸಂ) ರಾಹುಲ್ ಎಸ್. ರಾವ್ (‘ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ‘ ಖ್ಯಾತಿಯ ವಿಜೇತರು ಜೀ – ಕನ್ನಡ ) ಇವರುಗಳು ಭಾಗವಹಿಸಲಿದ್ದಾರೆ ಎಂದು ಲೋಕೇಶ್ ಊರುಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024