ಬಿಜೆಪಿಯು ಚುನಾವಣೆ ಎದುರಿಸಲು ಕೋಮು ದ್ವೇಷದ ಅಜೆಂಡಾಗಳನ್ನು ಮುಂದೆ ತಂದು ಮತೀಯ ವಿಭಜನೆಗೆ ಯತ್ನಿಸುತ್ತಿದೆ. ಬಿಜೆಪಿ ಸರಕಾರವು ಭ್ರಷ್ಟಾಚಾರ, ಬೆಲೆಯೇರಿಕೆ, ಮುಂತಾದ ಕೆಟ್ಟ ಆಡಳಿತದಿಂದ ಜನರು ಆಕ್ರೋಶಗೊಂಡಿದ್ದಾರೆ. ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಇಂತಹ ಕೋಮು ದ್ವೇಷದ ರಾಜಕೀಯ ಆಟಗಳನ‌್ನು ಸಿಪಿಐಎಂ ಪಕ್ಷವು ಬಲವಾಗಿ ವಿರೋಧಿಸುತ್ತಿದ್ದು ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಜನರ ಮೂಲಭೂತ ಪ್ರಶ್ನೆಗಳು ಚರ್ಚೆಯಾಗಬೇಕು ಎಂದು ಆಗ್ರಹಿಸುತ್ತದೆ ಎಂದು ಸಿ ಪಿ ಐ ಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಚುನಾವಣೆಯಲ್ಲಿ ಕೋಮುದ್ವೇಷದ ಅಜೆಂಡಾಗಳು ಬೇಡ, ಶಿಕ್ಷಣ,
ಉದ್ಯೋಗ ಸೃಷ್ಟಿ, ಸ್ಥಳೀಯರಿಗೆ ಉದ್ಯೋಗ ಒದಗಿಸುವ ವಿಷಯದಲ್ಲಿಯೂ ಜಿಲ್ಲೆ ಪೂರ್ತಿ ಹಿಂದುಳಿದಿದೆ. ಮಂಗಳೂರು ಸುತ್ತಮುತ್ತ ಬೃಹತ್ ಉದ್ಯಮಗಳು ಸ್ಥಾಪನೆಗೊಂಡಿದ್ದರೂ ಉದ್ಯೋಗವಕಾಶಗಳು ಅತ್ಯಂತ ಕಡಿಮೆ ಇದೆ. ಎಮ್ ಆರ್ ಪಿ ಎಲ್, ಎಸ್ ಇ ಝಡ್ ನಂತಹ ಸಾರ್ವಜನಿಕ ರಂಗದ ಉದ್ಯಮಗಳೂ ಸೇರಿದಂತೆ ಖಾಸಗಿ ರಂಗದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಸ್ಥಳೀಯ ಯುವಜನರನ್ನು ಉದ್ಯೋಗ ನೇಮಕಾತಿಯಲ್ಲಿ ಉದ್ದೇಶ ಪೂರ್ವಕವಾಗಿ ಹೊರಗಿಡುತ್ತಿದೆ. ಅತ್ಯುತ್ತಮ ಉದ್ಯೋವಕಾಶಗಳು ಉತ್ತರ ಭಾರತದವರ ಪಾಲಾಗುತ್ತಿದೆ. ಗುತ್ತಿಗೆ ಉದ್ಯೋಗಗಳಿಗೆ ಈಶಾನ್ಯ ರಾಜ್ಯಗಳಿಂದ ಏಜಂಟರ ಮೂಲಕ ಕಾರ್ಮಿಕರನ್ನು ಕರೆತಂದು ಅತಿ ಕಡಿಮೆ ವೇತನ ನೀಡಿ ದುಡಿಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ನಿರುದ್ಯೋಗ ವ್ಯಾಪಕವಾಗುತ್ತಿದೆ. ಜಿಲ್ಲೆಯ ಎಲ್ಲಡೆ ನಿರುದ್ಯೋಗಿಗಳ ದಂಡು ಕಂಡುಬರುತ್ತಿದೆ. ಜಿಲ್ಲೆಯ ಯುವಜನರು ಉದ್ಯೋಗ ಅರಸಿ ದೂರದ ಊರುಗಳಿಗೆ ವಲಸೆ ಹೋಗುವ, ಅಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕುದಲ್ಲದ ಕಡಿಮೆ ದರ್ಜೆಯ ಉದ್ಯೋಗಗಳನ್ನು ಮಾಡುವ ಸ್ಥಿತಿ ಉಂಟಾಗಿದೆ. ಜಿಲ್ಲೆಯ ಉದ್ಯಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಲು ಅವಕಾಶಗಳಿದ್ದರೂ ಜಿಲ್ಲೆಯ ಬಿಜೆಪಿ ಶಾಸಕರುಗಳು ಆ ನಿಟ್ಟಿನಲ್ಲಿ ಪ್ರತಿ ಬಾರಿಯೂ ಬಾಯಿ ಮಾತಿನ ಆಶ್ವಾಸನೆ ನೀಡಿ ಯುವಜನರನ್ನು ವಂಚಿಸುತ್ತಾ ಬಂದಿದ್ದಾರೆ.
ಇಂತಹ ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ತುಳುನಾಡಿನ ಮೂಲಭೂತ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲೆಯ ಬಿಜೆಪಿ ಶಾಸಕರುಗಳು ಪೂರ್ತಿ ವಿಫಲರಾಗಿದ್ದಾರೆ. ಬದಲಿಗೆ ಜನರ ಮಧ್ಯೆ ಕೋಮುದ್ವೇಷವನ್ನು ಬಿತ್ತುವ, ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡುವ ಪಿತೂರಿ ರಾಜಕಾರಣವನ್ನು ಬಿಜೆಪಿ ಪರಿವಾರ ನಡೆಸುತ್ತಾ ಬಂದಿದೆ. ಚುನಾವಣೆಯ ಹೊಸ್ತಿಲಲ್ಲಿಯೂ ಮುಸ್ಲಿಂ ವಿರೋಧಿ ಭಾವನೆಗಳನ್ನು ಬಡಿದೆಬ್ಬಿಸುವ ಯೋಜನೆಯನ್ನು ಸರಕಾರದ ಯಂತ್ರವನ್ನು ಬಳಸಿ ರೂಪಿಸುತ್ತಿದೆ. ಸುಳ್ಯ ಹಾಗೂ ಜಿಲ್ಲೆಯ ಜನತೆ ಬಿಜೆಪಿಯ ಇಂತಹ ಕೋಮುವಾದಿ ರಾಜಕಾರಣವನ್ನು ತಿರಸ್ಕರಿಸಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ಬದುಕಿನ ಪ್ರಶ್ನೆಗಳನ್ನು ಚರ್ಚೆಗೆತ್ತಿಕೊಳ್ಳಬೇಕು ಎಂದು ಜನತೆಯಲ್ಲಿ ಮನವಿ ಮಾಡುತ್ತದೆ. ಹಾಗೂ ಭ್ರಷ್ಟ, ಕೋಮುವಾದಿ, ಜನವಿರೋಧಿ ಆಡಳಿತ ನಡೆಸಿದ ಬಿಜೆಪಿಯನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಬೇಕು .ಸುದ್ದಿಗೋಸ್ಟಿಯಲ್ಲಿ ಸಿ ಪಿ ಐ ಎಂ ಜಿಲ್ಲಾ ಕಾರ್ಯದರ್ಶಿ ಸುನಿಲ್ ಬಜಲಕೇರಿ, ಕೆ ಪಿ ಜಾನಿ, ಬಿಜು ಅಗಾಸ್ಟಿನ್, ನಾಗರಾಜು, ಶಿವರಾಮ, ವಸಂತ ಮೊದಲಾದವರಿದ್ದರು.