- Thursday
- November 21st, 2024
ಮಾರ್ಚ್ 26 ರಂದು ಬೆಂಗಳೂರುನಲ್ಲಿ ನಡೆದ 18 ಕಿ. ಮೀ.ಮ್ಯಾರಥಾನ್ ಸ್ಪರ್ಧೆಯಲ್ಲಿ ಬಳ್ಪ ಗ್ರಾಮದ ಜಸ್ಮಿತಾ ಕೊಡೆಂಕಿರಿ ಇವರು ದ್ವಿತೀಯ ಸ್ಥಾನದೊಂದಿಗೆ ₹7500/ ನಗದು ಪುರಸ್ಕಾರ ಹಾಗೂ ಶಾಶ್ವತ ಫಲಕ ಪಡೆದುಕೊಂಡಿದ್ದಾರೆ. ಕೆ.ಎಸ್. ಎಸ್ ಕಾಲೇಜು ಸುಬ್ರಮಣ್ಯ ಹಾಗೂ ಆಳ್ವಾಸ್ ಕಾಲೇಜ್ ನ ಹಳೆ ವಿದ್ಯಾರ್ಥಿನಿಯಾದ ಇವರು ಮಂಗಳೂರಿನ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕಿಯಾಗಿ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯವು ತನ್ನದೇ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿದೆ. ಶೈಕ್ಷಣಿಕ, ಆರೋಗ್ಯ ಹಾಗೂ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಅತ್ಯಂತ ಸಾಮರಸ್ಯದಿಂದ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದೊಂದಿಗೆ ಬದುಕುತ್ತಿದೆ. ಆದರೆ ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುತ್ತೂರಿನ ಪ್ರಸಿದ್ಧ ವೈದ್ಯರಾಗಿರುವ ಡಾ.ಪ್ರಸಾದ್ ಭಂಡಾರಿ ಅವರು ಕ್ರೈಸ್ತ ಸಮುದಾಯದ ಬಗ್ಗೆ ಹಾಗೂ ಶಿಕ್ಷಣ ಸಂಸ್ಥೆಗಳ...
ಬಿಜೆಪಿಯು ಚುನಾವಣೆ ಎದುರಿಸಲು ಕೋಮು ದ್ವೇಷದ ಅಜೆಂಡಾಗಳನ್ನು ಮುಂದೆ ತಂದು ಮತೀಯ ವಿಭಜನೆಗೆ ಯತ್ನಿಸುತ್ತಿದೆ. ಬಿಜೆಪಿ ಸರಕಾರವು ಭ್ರಷ್ಟಾಚಾರ, ಬೆಲೆಯೇರಿಕೆ, ಮುಂತಾದ ಕೆಟ್ಟ ಆಡಳಿತದಿಂದ ಜನರು ಆಕ್ರೋಶಗೊಂಡಿದ್ದಾರೆ. ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಇಂತಹ ಕೋಮು ದ್ವೇಷದ ರಾಜಕೀಯ ಆಟಗಳನ್ನು ಸಿಪಿಐಎಂ ಪಕ್ಷವು ಬಲವಾಗಿ ವಿರೋಧಿಸುತ್ತಿದ್ದು ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಜನರ ಮೂಲಭೂತ...
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಗಳ ಆಯ್ಕೆ ವಿಚಾರದಲ್ಲಿ ಅಸಮಾಧಾನ ಸ್ವಾಭಾವಿಕ. ಎಲ್ಲ ಕಡೆ ಇರುವಂತೆ ಇಲ್ಲಿಯೂ ಆಗಿದೆ. ಅದನ್ನು ಪಕ್ಷದ ಹೈಕಮಾಂಡ್ ಸರಿಪಡಿಸುತ್ತದೆ” ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಎಂ. ಶಹೀದ್ ಹೇಳಿದ್ದಾರೆ. ಮಾ.28 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಪಕ್ಷ ಯಾರನ್ನು ಸೂಚಿಸುತ್ತದೆಯೋ ಅವರ ಪರ ನಾವು ಕೆಲಸ ಮಾಡುತ್ತೇವೆ. ಆದರೆ ಕೆಲವು...
ಅಕ್ರಮ ಕಟ್ಟಡ ಕಾಮಗಾರಿ ನಡೆಸುವವರ ವಿರುದ್ಧ ನ.ಪಂ. ಕಠಿಣ ಕ್ರಮ ಕೈಗೊಳ್ಳಲಿ : ಒತ್ತಾಯ ಕಳೆದ ವಾರ ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತದಿಂದ ಮೂವರು ಕಾರ್ಮಿಕರು ಮೃತಪಟ್ಟ ದುರ್ಘಟನೆ ನಡೆದಿದ್ದು, ಅವರ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡುವಲ್ಲಿ ಬಿಎಂಎಸ್ ಕಾರ್ಮಿಕ ಸಂಘಟನೆ ಶ್ರಮವಹಿಸಿದೆ. ಹಾಗೂ ನಗರ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಕೆಲಸ ಕಾರ್ಯಗಳ ವಿರುದ್ಧ ನಗರ...
ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ (Sullia Congress) ಕೆಪಿಸಿಸಿ ಘೋಷಿಸಿರುವ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸಿ ಸುಳ್ಯ ಭಾಗದ ಕಾಂಗ್ರೆಸ್ ಕಾರ್ಯಕರ್ತರು 15 ಬಸ್ ಗಳಲ್ಲಿ ಮಂಗಳೂರಿಗೆ ಬಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ನಡೆಸಿದ್ದಾರೆ. ‘ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’. ‘ನಂದಕುಮಾರ್ ಅವರಿಗೆ...
ರಂಗಮಯೂರಿಯಲ್ಲಿ ಎ.11 ರಿಂದ 18ರವರೆಗೆ ರಾಜ್ಯ ಮಟ್ಟದ ರಂಗಶೈ ಲಿಯ ಆಕರ್ಷಕ ಮಕ್ಕಳ ಬೇಸಿಗೆ ಶಿಬಿರವಾದ "ಬಣ್ಣ" ಕಾಯರ್ತೋಡಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಿರೂಪಣಾ ಕೌಶಲ್ಯ, ರಂಗ ತರಬೇತಿ, ನಾಟಕ ನಿರ್ಮಾಣ, ಸಾಹಿತ್ಯ, ಸಂಸ್ಕೃತಿ, ನೃತ್ಯ ತರಬೇತಿ, ಹಳ್ಳಿಮದ್ದು, ರಂಗ ಹೋಳಿ, ಗಾಳಿಪಟ ಉತ್ಸವ, ಯಕ್ಷಗಾನ ವೇಷಭೂಷಣ ಪ್ರಾತ್ಯಕ್ಷಿಕೆ,...
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಆಯ್ಕೆ ನಡೆದಿದೆ. ಸದಸ್ಯರಾಗಿ ಎಂ ಚಂದ್ರಕಾಂತ, ಶ್ರೀಮತಿ ಎ ನವಪ್ರಭ, ಶ್ರೀಮತಿ ಶಮಿತ ಪಿ ರೈ, ಕೆ ವಿಶ್ವನಾಥ ಭಟ್, ಪಿ ಗಂಗಾಧರ ರೈ, ಸುರೇಶ್ ಕುಮಾರ್ ಶೆಟ್ಟಿ, ಬಿ ಉದಯಪ್ರಸಾದ್, ಪಿ ರಾಧಾಕೃಷ್ಣ ಹಾಗೂ ಪ್ರಧಾನ ಅರ್ಚಕರು ಆಯ್ಕೆಯಾಗಿದ್ದಾರೆ.
ಸುಳ್ಯ ತಾಲೂಕಿನ ನಾಲ್ಕೂರಿನ ಚಾರ್ಮತ, ವಲ್ಪಾರೆ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡು ಹೊತ್ತಿ ಉರಿಯುತ್ತಿದೆ ಎಂದು ತಿಳಿದುಬಂದಿದ್ದು, ಆಸುಪಾಸಿನ ಪ್ರದೇಶದಲ್ಲಿ ಹೊಗೆ ಆವರಿಸಿದೆ ಎಂದು ತಿಳಿದುಬಂದಿದೆ.ಅರಣ್ಯ ಇಲಾಖೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳಿಯರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
Loading posts...
All posts loaded
No more posts