ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುಳ್ಯ ಗೌಡರ ಯುವ ಸೇವಾ ಸಂಘ ಪವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಇದರ 20ನೇ ಕಕ್ಕೆಪದವು ಶಾಖೆಯು ವಿದ್ವಾನ್ ರಾಜ್ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಆರಂಭಗೊಂಡಿತು.
ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ ಶಾಖೆ ಉದ್ಘಾಟಿಸಿ ಮಾತನಾಡಿ, ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳು ಕಾರ್ಯಾರಂಭಗೊಳ್ಳುವುದು ಸಂತಸದ ವಿಚಾರ. ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಈ ಸಂಘ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವುದು ಶ್ಲಾಘನೀಯ ಎಂದರು. ಕಕ್ಯಪದವು ಶ್ರೀಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಿಸಿದರು. ಕಲ್ಲೇರಿ ನವಚೇತನ ತೋಟಗಾರಿಕ ಕಂಪೆನಿ ಸ್ಥಾಪಕ ಅಧ್ಯಕ್ಷ ಪಿ.ದುಗ್ಗಪ್ಪ ಗೌಡ ಪೊಸಂದೋಡಿ ಪ್ರಥಮ ಠೇವಣಿ ಪತ್ರ ವಿತರಿಸಿದರು. ಸಂಘದ ಅಧ್ಯಕ್ಷ ಪಿ.ಸಿ. ಜಯರಾಮ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು 25 ಶಾಖೆಗಳನ್ನು ಆರಂಭಿಸಲಾಗುವುದು ಎಂದರು.
ಸಂಘವು ಕಳೆದ 25 ವರ್ಷಗಳಿಂದ ನಿರಂತರ ಲಾಭದಲ್ಲಿ ನಡೆಯುತ್ತಿದ್ದು, 800 ಕೋ.ರೂ.ಗಳಿಗೂ ಮಿಕ್ಕಿ ವಾರ್ಷಿಕ ಶುಭ ಹಾರೈಸಿದರು. ವ್ಯವಹಾರ ನಡೆಸುತ್ತಿದೆ. 153 ಕೋ.ರೂ. ಗಳಿಗೂ ಮಿಕ್ಕಿ ಠೇವಣಿ ಹೊಂದಿದೆ. 147 ಕೋ.ರೂ.ಗಳಿಗೂ ಮಿಕ್ಕಿ ಸಾಲ ವಿತರಿಸಿದೆ. 168 ಕೋ.ರೂ.ಗಳಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದೆ. ಸಂಘವು ಅತೀ ಕಡಿಮೆ ಬಡ್ಡಿ ದರದಲ್ಲಿ ಶೀಘ್ರ ವಾಹನ ಸಾಲ ಮತ್ತು ಆಭರಣ ಈಡಿನ ಸಾಲ ನೀಡುತ್ತಿದೆ. ಅಡಮಾನ, ಗೃಹ ನಿರ್ಮಾಣ, ವಾಣಿಜ್ಯ ಕಟ್ಟಡ, ವ್ಯಾಪಾರ, ಜಾಗ ಖರೀದಿ, ವೇತನ ಹಾಗೂ ಇತರ ಸಾಲ ನೀಡುತ್ತಿದೆ ಎಂದು ಅವರು ತಿಳಿಸಿದರು.
ಗ್ರಾ.ಪಂ. ಸದಸ್ಯ ಸಂಜೀವ ಗೌಡ ಅಗ್ಫಲ, ಕಟ್ಟಡ ಮಾಲಕ ರಾಜೇಂದ್ರ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ. ಮಾಜಿ ಸದಸ್ಯ ಬಿ. ಪದ್ಮಶೇಖರ ಜೈನ್ ಅವರು ಆಗಮಿಸಿ ಶುಭ ಹಾರೈಸಿದರು.
ಸಂಘದ ನಿರ್ದೇಶಕರಾದ ಜಾಕೆ ಸದಾ ನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಾಮೋದರ ಎನ್.ಎಸ್., ಜಯಲಲಿತಾ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್. ಮಾವಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು ನವೀನ್ ಕುಮಾರ್ ಜೆ.ವಿ., ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ಸ್ವಾಗತಿಸಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ವಂದಿಸಿದರು.