- Thursday
- November 21st, 2024
ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಗುಪ್ತವಾರ್ತೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿ ಮೂರು ವರ್ಷಗಳ ಹಿಂದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಆಗಮಿಸಿದ್ದರು. ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವಾರು ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದರು.ಉಡುಪಿ ಜಿಲ್ಲೆಯ ಕಾಪು ಮೂಲದವರಾದ ನವೀನ್ ಚಂದ್ರ ಅವರನ್ನು ಮುಂಬರುವ ವಿಧಾನ...
ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಗಡುವು ನೀಡಿತ್ತು. ಮಾರ್ಚ್ 31 2023ರೊಳಗೆ ಎಲ್ಲರೂ ಆಧಾರ್-ಪ್ಯಾನ್ ಲಿಂಕ್ ಮಾಡಲು ಡೆಡ್ಲೈನ್ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಈ ಗಡುವನ್ನು ವಿಸ್ತರಣೆ ಮಾಡಿದೆ. ಆಧಾರ್ ಜೋಡಣೆ ಅವಧಿಯನ್ನು 2023 ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಪ್ಯಾನ್ ಕಾರ್ಡ್ನಲ್ಲಿನ ವಿಳಾಸವನ್ನು ಆಧಾರ್ ಸಹಾಯದಿಂದ...
33/11 ಕೆ.ವಿ ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ.30 ರಂದು ಗುರುವಾರ ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಕುಮಾರಧಾರ, ನಡುಗಲ್ಲು, ಹರಿಹರ, ಕೈಕಂಬ, ಏನೆಕಲ್ಲು ಹಾಗೂ ಆದಿಶೇಷ ಫೀಡರ್ಗಳಲ್ಲಿ ಬೆಳಿಗ್ಗೆ 9.00 ರಿಂದ ಸಾಯಂಕಾಲ 6.00 ರ ತನಕ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ...
ಕೊನೆಯಿರದ ದಾರಿಯಲ್ಲಿ ಕೊನೆ ಹುಡುಕುವ ಕನಸೇತಕೆ…?ಮೂರು ದಿನದ ಬದುಕಿನಲ್ಲಿ ಗುರಿ ಸೇರುವ ತವಕದಲ್ಲಿ…ತೆಗಳುವವರ ಮಾತುಗಳಿಗೆ ಕಿವಿಯ ಕೊಟ್ಟು ಸಾಗಬೇಕೇ…?ಬೆನ್ನು ತಟ್ಟಿ ಜೊತೆಗೆ ನಿಲ್ಲೋ ನಿನ್ನವರು ಜೊತೆಗಿರಲು, ನಿನ್ನ ಜೊತೆಗಿರಲು…ಪ್ರತಿಯೊಂದು ಹೆಜ್ಜೆಯಲ್ಲೂ ಸವಾಲು ನೂರು ತುಂಬಿರಲು, ಏಕಾಂಗಿ ನೀನಲ್ಲ ನಿನ್ನವರ ಮಧ್ಯದಲ್ಲಿ…ಜೊತೆಗೆ ಯಾರೂ ಇಲ್ಲವೆಂದು ಕೊರಗದಿರು ನೀನಿಲ್ಲಿ, ನಿನ್ನವರ ಪ್ರೀತಿ ಮುಂದೆ ಬೇರೆನು ಬೇಕಿಲ್ಲಿ, ನಿನಗೆ ಬೇರೇನು...
ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುಳ್ಯ ಗೌಡರ ಯುವ ಸೇವಾ ಸಂಘ ಪವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಇದರ 20ನೇ ಕಕ್ಕೆಪದವು ಶಾಖೆಯು ವಿದ್ವಾನ್ ರಾಜ್ ಕಾಂಪ್ಲೆಕ್ಸ್ನ ಒಂದನೇ ಮಹಡಿಯಲ್ಲಿ ಆರಂಭಗೊಂಡಿತು. ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ ಶಾಖೆ ಉದ್ಘಾಟಿಸಿ ಮಾತನಾಡಿ, ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳು ಕಾರ್ಯಾರಂಭಗೊಳ್ಳುವುದು...
2023ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾ.31ರಿಂದ ಆರಂಭಗೊಳ್ಳಲಿದೆ. ಈ ಬಾರಿ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದ್ದು ಒಟ್ಟು 1848 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಮಾ.31 : ಪ್ರಥಮ ಭಾಷೆಎ.3: ಗಣಿತಎ.6 : ದ್ವಿತೀಯ ಭಾಷೆಎ.10: ವಿಜ್ಙಾನಎ.12 : ತೃತೀಯ ಭಾಷೆಎ.15 : ಸಮಾಜ ವಿಜ್ಷಾನಹಾಲ್ ಟಿಕೆಟ್ ಕಡ್ಡಾಯ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಹಾಲ್ ಟಿಕೇಟ್...
ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಎ.೧ ಮತ್ತು ೨ ಕುಂಚಡ್ಕದ ಒತ್ತೆಕೋಲ ಮಜಲಿನಲ್ಲಿ ನಡೆಯಲಿರುವುದು. ಎ.೧ ರಂದು ಬೆಳಗ್ಗೆ ಗಣಪತಿ ಹವನ ಶುದ್ಧಿ ಕಲಶವಾಗಿ ಮೆಲೇರಿಗೆ ಅಗ್ನಿ ಕುಂಡ ಜೋಡಣೆಯ ಕಾರ್ಯ ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ತೀಯ ಸಮಾಜ ಬಾಂಧವರಿಂದ ನಡೆಯಲಿರುವುದು. ರಾತ್ರಿ ವಯನಾಟ್ ಕುಲವನ್ ದೈವಸ್ಥಾನದಿಂದ ಭಂಡಾರ...
ಕರ್ನಾಟಕ ರಾಜ್ಯದ ಮುಂಬರುವ ಚುನಾವಣೆಯಲ್ಲಿ ತುಳುವನ್ನು ರಾಜ್ಯದ ಅಧೀಕೃತ ಭಾಷೆಯನ್ನಾಗಿಸಲು ಸಹಕರಿಸುವವರಿಗೆ ಪಕ್ಷಾತೀತವಾಗಿ ಮತ ಕೊಟ್ಟು ಬೆಂಬಲಿಸಲು ತುಳುವರ ಮನ ಒಲಿಸುವ ಅಭಿಯಾನವನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಹೇಳುವ ಮೂಲಕ ದೆಹಲಿಯ ತುಳುಸಿರಿ ಸಂಘಟನೆಯ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ ಅನೇಕ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ತುಳು ಭಾಷೆಯ ರಾಜ್ಯ ಮಾನ್ಯತೆಯ ತುಳುವರ ಮಹತ್ವಾಕಾಂಕ್ಷೆಗೆ ಹೊಸ...