

ತಳೂರು ಮುಖ್ಯರಸ್ತೆಯಿಂದ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ಮಾಡದವರೆಗಿನ ರಸ್ತೆ ಸುಮಾರು 30 ಲಕ್ಷದಲ್ಲಿ ಕಾಂಕ್ರಿಟೀಕರಣಗೊಂಡಿದ್ದು ಇಂದು ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಂದರು,ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮೂಲೆತೋಟ, ಚಂದ್ರಶೇಖರ ಭಟ್ ತಳೂರು, ನವೀನ್ ಜಾಕೆ, ಶಶಿಧರ ಜಾಕೆ, ಶಿವಣ್ಣ ಗೌಡ ತಳೂರು, ಮುಕುಂದ ಕೊಡಪಾಲ,ಗ್ರಾ.ಪಂ.ಸದಸ್ಯ ದುರ್ಗದಾಸ್ ಮೆತ್ತಡ್ಕ ಹಾಗೂ ಊರವರು ಉಪಸ್ಥಿತರಿದ್ದರು.