ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ
ಅರಂತೋಡು ಗ್ರಾಮ ಪಂಚಾಯತ್ (ಅಮೃತ ಗ್ರಾಮ ಪಂಚಾಯತ್ ಹಾಗೂ ಗಾಂಧಿ ಗ್ರಾಮ ಪುರಸ್ಕೃತ) ಸಹಯೋಗದಲ್ಲಿ ಅರಂತೋಡು ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಅಮೃತ ಉದ್ಯಾನವನ, ಅಮೃತ ಮುಕ್ತಿ ಧಾಮ ಹಾಗೂ ಅಮೃತ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ ಎನ್, ಅರಂತೋಡು ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಹರಿಣಿ ಡಿ.ಡಿ., ಮಾಜಿ ಸುಳ್ಯ ತಾ.ಪಂ.ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಮೇದಪ್ಪ, ಮಾಜಿ ಜಿ.ಪಂ. ಸದಸ್ಯರಾದ ಹರೀಶ್ ಕಂಜಿಪಿಲಿ, ಅರಂತೋಡು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ತೆಕ್ಕಿಲ್ ಪ್ರತಿಷ್ಠಾನದ ಟಿ.ಎಂ.ಶಹೀದ್, ಅರಂತೋಡು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಅಧ್ಯಕ್ಷರಾದ ಕೆ.ಆರ್.ಪದ್ಮನಾಭ, ನಿವೃತ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ, ಗ್ರಾ.ಪಂ.ಸದಸ್ಯರಾದ ಶಿವಾನಂದ ಕುಕ್ಕಂಬಳ, ಕೇಶವ ಅಡ್ತಲೆ, ಇನ್ನಿತರರು ಉಪಸ್ಥಿತರಿದ್ದರು.
- Thursday
- November 21st, 2024