ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 19 ಮತ್ತು 20 ರಂದು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.24 ರಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಗಿರಿಧರ ಸ್ಕಂದ, ಪದ್ಮಯ್ಯ ಜಾಡಿಮನೆ, ಗಿರೀಶ್ ಆಚಾರ್ಯ ಕುಲ್ಕುಂದ, ಯತೀಶ್ ಪಳ್ಳಿಗದ್ದೆ, ಜಯಣ್ಣ ಪಳ್ಳಿಗದ್ದೆ, ಜಯಂತ್ ಕುದುರೆಮಜಲು, ಕವಿತಾ ಗಣೇಶ್, ಸೀನಪ್ಪ ಗೌಡ ನಡುತೋಟ ಹಾಗೂ ದೇವಳದ ಅರ್ಚಕರು ಉಪಸ್ಥಿತರಿದ್ದರು.
ಏಪ್ರಿಲ್ 13 ರಂದು ಪೂರ್ವಾಹ್ನ 8:30 ಕ್ಕೆ ಮುಹೂರ್ತದ ಗೊನೆ ಕಡಿಯುವುದು ಹಾಗೂ ಏಪ್ರಿಲ್ 19 ರಂದು ಹಸಿರು ಕಾಣಿಕೆ ಪ್ರಾರಂಭಗೊಳ್ಳಲಿದೆ.
ಏಪ್ರಿಲ್ 19 ರಂದು ಮದ್ಯಾಹ್ನ 12:15 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾಯಂಕಾಲ 5:00 ಗಂಟೆಗೆ ತಂತ್ರಿಗಳ ಆಗಮನ, ಸಾಯಂಕಾಲ 6:30 ರಿಂದ ಪ್ರಾಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಾಹ ವಾಚನ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಏಪ್ರಿಲ್ 20 ರಂದು ಬೆಳಿಗ್ಗೆ 7:00 ರಿಂದ ಗಣಪತಿ ಹವನ, ಕಲಶಪೂಜೆ, ಮಹಾಪೂಜೆ, ಬೆಳಿಗ್ಗೆ 9:00 ರಿಂದ ಶತರುದ್ರಾಭಿಷೇಕ ಪ್ರಾರಂಭ, ಪರಿವಾರ ದೇವರುಗಳಿಗೆ ಕಲಶ ತಂಬಿಲ ಸೇವೆ, ಬೆಳಿಗ್ಗೆ 11:30 ಕ್ಕೆ ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ, ಮದ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನಂತರ ಸಂಜೆ 6:00 ರಿಂದ ದೀಪಾರಾಧನೆ, ತಾಯಂಬಕ, ರಂಗಪೂಜೆ, ರಾತ್ರಿ 8:00 ರಿಂದ ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
(ವರದಿ : ಉಲ್ಲಾಸ್ ಕಜ್ಜೋಡಿ)
- Saturday
- November 23rd, 2024