ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ವಿಜ್ರಂಭಣೆಯಿಂದ ನೆರವೇರಿದ್ದು, ಸಾವಿರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಗಂಧಪ್ರಸಾದ ಸ್ವೀಕರಿಸಿದರು.
ಮಾ.18ರಂದು ಬೆಳಿಗ್ಗೆ ಗಣಪತಿ ಹವನ, ಶುದ್ಧಿಕಲಶ, ಮೇಲೇರಿ ಕಾರ್ಯಕ್ರಮ, ಅಶ್ವತ್ಥ ಪೂಜೆ, ನಂತರ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭಂಡಾರ ತೆಗೆಯುವುದು ನಂತರ ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನಸಂತರ್ಪಣೆ, ಕುಳಿಚಾಟ ನಡೆಯಿತು. ರಾತ್ರಿ ಮಂಜು ಬ್ರದರ್ಸ್ ಡ್ಯಾನ್ಸ್ ಟ್ರೂಫ್ ಮಾವಿನಕಟ್ಟೆ ಇವರಿಂದ, ಕು| ಷನ್ವಿಕ ಲೋಕೇಶ್, ಸೋನ ಮನೆ, ಬಹರೈನ್ ಇವರಿಂದ ನೃತ್ಯ ವೈಭವ, ಕು| ಪ್ರಣನ್ಯ ಕುದ್ಪಾಜೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫೈನಲ್ ಲಿಸ್ಟ್‌ನ ಪ್ರತಿಭಾವಂತ ಕಲಾವಿದೆ ಇವರಿಂದ ನೃತ್ಯ ವೈಭವ ಹಾಗೂ ಸನ್ಮಾನ ಕಾರ್ಯಕ್ರಮ, ಕು| ಶ್ರೇಯ ಮೇರ್ಕಜೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಲಾವಿದೆ ಇವರ ತಂಡದಿಂದ ನೃತ್ಯ ವೈಭವ ಹಾಗೂ ಇವರ ನೃತ್ಯ, ಅಭಿನಯ, ಕ್ರೀಡೆ, ಸಂಗೀತ, ಹಾಗೂ ನಿರೂಪಣೆಯಲ್ಲಿ ವಿಶೇಷ ಸಾಧನೆಗಾಗಿ ಸನ್ಮಾನ ಕಾರ್ಯಕ್ರಮವು ನಡೆಯಿತು. ರಾತ್ರಿ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ಅಭಿನಯಿಸುವ ನಾಡ್ಂಡಲ ತಿಕ್ಕಂದ್ ನೈಜ ಘಟನೆ ಆಧಾರಿತ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಮಾ19ರಂದು ಬೆಳಿಗ್ಗೆ ಕಳಸಾಟಕ್ಕೆ ಹೋಗುವುದು, ದೈವ ಮೇಲೆರಿಗೆ ಪ್ರವೇಶ,ಹರಿಕೆ ಪ್ರಸಾದ ವಿತರಣೆ ನಡೆಯಿತು.
- Saturday
- November 23rd, 2024