
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ, ಬ್ಲಾಕ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಳ್ಯ ಪರಿವಾರಕಾನ ಗ್ರಾಂಡ್ ಪರಿವಾರ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಜರಗಿತು
ಅಧ್ಯಕ್ಷತೆ ಯನ್ನು ಸುಳ್ಯ ಬ್ಲಾಕ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಇಸ್ಮಾಯಿಲ್ ಪಡಿಪಿನoಗಡಿ
ವಹಿಸಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಪದಗ್ರಹಣ ನೆರವೇರಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶುಕೂರ್ ಹಾಜಿ ಉದ್ಘಾಟಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಕೆ. ಎಂ. ಮುಸ್ತಾಫ ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯಅತಿಥಿ ಗಳಾಗಿ ಕೆಪಿಸಿಸಿ ಸಂಯೋಜಕ ಎಚ್. ಎಂ. ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ಎನ್ಎಸ್ ಯುಐ ಅಧ್ಯಕ್ಷ ಕೀರ್ತನ್ ಕೊಡೆಪಾಲ ಮೊದಲಾದವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಕೆಪೆಕ್ ಮಾಜಿ ನಿರ್ದೇಶಕ ಪಿ. ಎ ಮಹಮ್ಮದ್ ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಫೂರ್ ಕಲ್ಮಡ್ಕ, ಗೌರವ ಸಲಹೆ ಗಾರರಾದ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಬಾಪು ಸಾಹೇಬ್, ಮಹಮ್ಮದ್ ಕುಂಞ ಗೂನಡ್ಕ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಯುವ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳಾದ ಎಚ್. ಎ. ಉಮ್ಮರ್, ಬಶೀರ್ ನೇಲ್ಯಮಜಲು, ಎ. ಕೆ ಇಬ್ರಾಹಿಂ, ಡಿಸಿಸಿ ಮಾಜಿ ಕಾರ್ಯದರ್ಶಿ ಮಜೀದ್ ಅಡ್ಕಾರ್, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್, ಡಾ. ಆರ್. ಬಿ. ಬಶೀರ್, ಅಡ್ವೋಕೇಟ್ ಅಬೂಬಕ್ಕರ್ ಅಡ್ಕಾರ್, ಮೂಸ ಪೈoಬೆಚ್ಚಾಲು, ಮೊದಲಾದವರು ಉಪಸ್ಥಿತರಿದ್ದರು, ನಗರ ಪಂಚಾಯತ್ ಸದಸ್ಯ, ತಾಲೂಕು ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಧೀರಕ್ರಾಸ್ತ ಬೀರಮಂಗಲ ವಂದಿಸಿದರು.