ಉಬರಡ್ಕ ಮಿತ್ತೂರು ಗ್ರಾಮದ ಯುವಕ ಮಂಡಲ ಉಬರಡ್ಕ ಮಿತ್ತೂರು ಹಾಗೂ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಪ್ರಥಮ ನೋಂದಾಯಿತ ಯುವಕ ಮಂಡಲದ ಸುವರ್ಣ ಮಹೋತ್ಸವ ಆಚರಣೆಯು ಮಾ.20 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಯುವಕ ಮಂಡಲದ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಾಳ, ಉಬರಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಮಿತ್ತೂರು ನಾಯರ್ ಉಳ್ಳಾಕುಲು ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ರಮಣ ಕೆದಂಬಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ನಾಗೇಶ, ಉಬರಡ್ಕ ಮಿತ್ತೂರು ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿ ಕೆ.ಆರ್. ಭಾಗವಹಿಸಲಿದ್ದಾರೆ.
ರಾಮಘಡ ಎಸ್ಟೇಟ್ ನೆಕ್ಕಿಲ ಇದರ ರಾಧಾಕೃಷ್ಣ ಪೈ, ಉಬರಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ವಿನಯ ಕೆಟರರ್ಸ್ ನ ವಿನಯಕುಮಾರ್ ಯಾವಟೆ ಸಭೆಯಲ್ಲಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಮಿತ್ತೂರು ಉಳ್ಳಾಕುಲು ದೊಡ್ಡ ಪೂಜಾರಿ ರವಿರಾಮ ರೈ ಮಿತ್ತೂರು ಇವರನ್ನು ಸನ್ಮಾನಿಸಲಾಗುವುದು.
ನಿವೃತ್ತ ಯೋಧರುಗಳಾದ ದಿವಾಕರ ಶೆಟ್ಟಿಹಿತ್ಲು, ವೆಂಕಟ್ರಮಣ ಕೆದಂಬಾಡಿ, ದಿನೇಶ್ ಸುಳ್ಯಕೋಡಿ, ಎಲ್ಯಣ್ಣ ಗೌಡ ಪಾನತ್ತಿಲ, ನಾರಾಯಣ ಪಾಟಾಳಿ ಕುತ್ತಮೊಟ್ಟೆ, ಜಯಪ್ರಕಾಶ್ ಬಿ.ಎಂ ಬಳ್ಳಡ್ಕ, ಶಿವಪ್ರಸಾದ್ ಡಿ.ಕೆ ಪಾಲಡ್ಕ ಹಾಗೂ ಯುವಕ ಮಂಡಲದ ಎಲ್ಲಾ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಗುವುದು.
ಸಂಜೆ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿರುವುದು. ಸಭಾ ಕಾರ್ಯಕ್ರಮದ ನಂತರ ರಾತ್ರಿ 9.00 ರಿಂದ ಚಾ ಪರ್ಕ ಕಲಾವಿದರಿಂದ ರಾಜ್ಯಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ಕಲಾವಿದ ಬೋಜರಾಜ ವಾಮಾಂಜೂರು ಸಮಾಗಮಾದಲ್ಲಿ ಪ್ರಸಿಧ್ಧ ನಾಟಕ ಪನಿಯರ ಆವಂದಿನ ನಡೆಯಲಿದೆ.
- Thursday
- November 21st, 2024