ಕ್ರಿಕೇಟ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದೆ. ಇದರೊಂದಿಗೆ ಗ್ರಾಮೀಣರು ಆಡುವ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಕೂಡಾ ಉತ್ತಮವಾದುದು. ಕ್ರಿಕೇಟ್ ಪಂದ್ಯಾಟಗಳು ಗ್ರಾಮೀಣ ಕ್ರೀಡಾಳುಗಳ ಪ್ರತಿಭಾ ಅನಾವರಣಕ್ಕೆ ವೇದಿಕೆಯಾಗಿದೆ. ಸುಮಾರು ೪ ದಶಕಗಳ ಇತಿಹಾಸ ಹೊಂದಿದ ಗಾಂಗೇಯ ಕ್ರಿಕೇಟ್ ತಂಡ ನಡೆಸಿದ ಈ ಪಂದ್ಯಾಟವು ಯುವಕರ ಕ್ರಿಕೇಟ್ ಆಸಕ್ತಿಯನ್ನು ಉತ್ತೇಜಿಸಲು ವಿಶೇಷ ಅವಕಾಶ ಒದಗಿಸಿದೆ ಎಂದು ಗ್ರಾ.ಪಂ.ಸದಸ್ಯ ಮತ್ತು ಗಾಂಗೇಯ ತಂಡದ ಹಿರಿಯ ಆಟಗಾರ ರಾಜೇಶ್ ಎನ್.ಎಸ್‌ಹೇಳಿದರು.
ಸುಮಾರು ೪೬ ವರ್ಷ ಇತಿಹಾಸ ಹೊಂದಿರುವ ಗಾಂಗೇಯ ಕ್ರಿಕೇರ‍್ಸ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ದಿ.ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥ ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ೨೦ ತಂಡಗಳ ಗಾಂಗೇಯ ಟ್ರೋಫಿ ಕ್ರಿಕೇಟ್ ಪಂದ್ಯಾಟ- ೨೦೨೩ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜಮುಖಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಯುವಕರು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಪಂದ್ಯಾಟಗಳು ಮಹತ್ತರವಾದುದು.ಕೃಷ್ಣ ಕುಮಾರ್ ರುದ್ರಪಾದ ಅವರು ಸಾಮಾಜಿಕ, ಧಾರ್ಮಿಕ, ಸಮಾಜಮುಖಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ವ್ಯಕ್ತಿ.ಬಡವರ ಬಗ್ಗೆ ಅತೀವ ಕಾಳಜಿ ಇದ್ದ ಜನಪರ ವ್ಯಕ್ತಿತ್ವದ ಶ್ರೇಷ್ಠ ನಾಯಕತ್ವ ಗುಣ ಹೊಂದಿದ ಕೃಷ್ಣ ಕುಮಾರ್ ಅವರ ನೆನಪಿಗಾಗಿ ನಡೆಸಿದ ಪಂದ್ಯಾಟವು ಶ್ಲಾಘನೀಯ ಎಂದರು.
ಕ್ರಿಕೇಟ್ ಆಡುವ ಮೂಲಕ ಪಂದ್ಯಾಟಕ್ಕೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಚಾಲನೆ ನೀಡಿದರು. ಗಾಂಗೇಯ ಕ್ರಿಕೇರರ್ಸ್ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು.ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್, ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್, ಗಾಂಗೇಯದ ಹಿರಿಯ ಆಟಗಾರ ಮತ್ತು ಕಲಾವಿದ ಯಶೋಧಕೃಷ್ಣ ನೂಚಿಲ,
ತಂಡದ ನಾಯಕ ಮಹೇಶ್ ಕುಮಾರ್ ಎಸ್, ನಿರ್ಣಾಯಕರಾದ ಹರೀಶ್ ಪಡೀಲ್, ಮೋಹನ್ ಯಯ್ಯಾಡಿ, ಸುರೇಶ್ ಬೆದ್ರ, ನಿರ್ಣಾಯಕರಾದ ಸುಕುಮಾರ್ ಬೆಂಗಳೂರು, ಸತೀಶ್ ಮಂಗಳೂರು, ಗೋಪಿ ಮಂಗಳೂರು ಮುಖ್ಯಅತಿಥಿಗಳಾಗಿದ್ದರು. ಗಾಂಗೇಯ ತಂಡದ ಮಾಜಿ ಕಪ್ತಾನ ಮತ್ತು ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿದರು. ಸುಕುಮಾರ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.