ಶ್ರೀ ರಾಜ್ಯ ದೈವ ಪುರುಷ ದೈವ ದೈವಸ್ಥಾನ ಕಂದ್ರಪ್ಪಾಡಿ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ನಿರಂಜನ್ ಕಡ್ಲಾರು ಸಾಹಿತ್ಯದ ಭಕ್ತಿಗೀತೆಗಳನ್ನು ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್ ಅಂಗಾರ ಬಿಡುಗಡೆಗೊಳಿಸಿದರು.
ಅವರು ಮಾರ್ಚ್ 14ರಂದು ಕಂದ್ರಪ್ಪಾಡಿ ಜಾತ್ರೋತ್ಸವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಕ್ತಿ ಗೀತೆಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎ.ವಿ ತೀರ್ಥರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಚಳ್ಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುಲೋಚನಾ ದೇವ, ಶ್ರೀ ಕ್ಷೇತ್ರ ಕಂದ್ರಪ್ಪಾಡಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಭಕ್ತಿಗೀತೆಗಳ ಸಂಕಲನದಲ್ಲಿ
- ರಕ್ಷಿಸೋ ಎಮ್ಮನ್ನು ಕಾರ್ನಿಕ ಶಕ್ತಿಯೇ
ಈ ಗೀತೆಗೆ ಅಂಕಿತಾ ಆಚಾರ್ಯ ಕಡ್ಲಾರು - ದರುಶನವ ನೀಡು ದೈವವೇ
ಈ ಗೀತೆಗೆ ಪ್ರಶಾಂತ್ ಕುಮಾರ್ ಕುಡುಂಬಿಲ( ಚೊಕ್ಕಾಡಿ) ಹಾಗೂ ಚೈತ್ರಾ ರವಿ ಕಳಿಗೆ - ಕಂದ್ರಪ್ಪಾಡಿ ಮಣ್ಣ್ ಡ್ ಉದಿತಿ ದೈವೋಲೆ
ಈ ಗೀತೆಗೆ ಸುಧಾಮ ಪೆರಾಜೆ ಹಾಗೂ ಅಂಕಿತಾ ಆಚಾರ್ಯ ಕಡ್ಲಾರು - ಶ್ರೀ ಕ್ಷೇತ್ರದ ಕಥನಗೀತೆ
ಈ ಗೀತೆಗೆ ಮಿಥುನ್ ರಾಜ್ ವಿದ್ಯಾಪುರ ಹಾಗೂ ಬೇಬಿ! ನಮ್ಯ ಎನ್ ಶೆಟ್ಟಿ ಸುಬ್ರಹ್ಮಣ್ಯ ಇವರುಗಳ ಕಂಠಸಿರಿಯಲ್ಲಿ ಮೂಡಿ ಬಂದಿರುತ್ತದೆ.
ಈ ಗೀತೆಗೆ ಮಿಥುನ್ ರಾಜ್ ವಿದ್ಯಾಪುರ ಇವರ ಸಂಗೀತವಿದ್ದು, ಇಂಧುದರ ಹಳೆಯಂಗಡಿ ಇವರ ಸಂಕಲನವಿದೆ.
ಈ ಭಕ್ತಿಗೀತೆಗಳನ್ನು N A Times ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.