ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಕುಡೆಕಲ್ಲು ಮನೆತನದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ಮಾ.24 ರಿಂದ 26 ರತನಕ ನಡೆಯಲಿರುವುದು.
ಮಾ.24 ರಂದು ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಕಳಿಯಾಟಕ್ಕೆ ಕೂಡುವುದು. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ, ನಂತರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ತರುವುದು. ರಾತ್ರಿ ಗಂಟೆ 10.00 ಕ್ಕೆ
ಶ್ರೀ ವಿಷ್ಣುಮೂರ್ತಿ ದೈವ ದ ಕುಲ್ಚಾಟವಾಗಿ ಗುರು ಕಾರ್ನೋರು ದೈವದ ಕೋಲ ನಡೆಯಲಿದೆ. ಮಾ.25 ರಂದು ಪೂರ್ವಾಹ್ನ ಶ್ರೀ ಪೊಟ್ಟ ದೈವದ ಕೋಲ, ಅಪರಾಹ್ನ ಶ್ರೀ ರಕ್ತೇಶ್ವರೀ ದೈವದ ಕೋಲ ನಡೆದು ರಾತ್ರಿ ಗಂಟೆ 8.30 ರಿಂದ ಶ್ರೀ ವಿಷ್ಣುಮೂರ್ತಿ ,ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳ ಕಳಿಯಾಟ ನಡೆಯಲಿರುವುದು. ಮರುದಿನ ಬೆಳಗ್ಗೆ ಗಂಟೆ 8.00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ರಾತ್ರಿ ಗಂಟೆ 9.00 ರಿಂದ ಶ್ರೀ ವಿಷ್ಣುಮೂರ್ತಿ ದೈವ,
ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳ ಕಳಿಯಾಟ ನಡೆದು ಶ್ರೀ ವಿಷ್ಣುಮೂರ್ತಿ ದೈವದ ಕಲಶ ನಂತರ ಹರಿಕೆ ಪ್ರಸಾದ ವಿತರಣೆಯಾಗಲಿರುವುದು. ಈ ಸಂದರ್ಭದಲ್ಲಿ ಹರಕೆಯ ತುಲಾಭಾರ ಸೇವೆಯು ನಡೆಯಲಿದೆ. ಮರುದಿನ ಬೆಳಿಗ್ಗೆ ಶ್ರೀ ಪಂಜುರ್ಲಿ ದೈವದ ಕೋಲ ನಡೆಯಲಿರುವುದು. ಕಳಿಯಾಟ ಮಹೋತ್ಸವ ದ ಸದ್ರಿ ದಿನಗಳಲ್ಲಿ ಸಾರ್ವಜನಿಕ ಅನ್ನದಾನವು ನಿರಂತರವಾಗಿ ನಡೆಯಲಿದೆ ಎಂದು ಆಡಳ್ತೆದಾರರಾದ ಕುಡೆಕಲ್ಲು ವಿಶ್ವನಾಥ ಗೌಡ ರವರು ತಿಳಿಸಿದರು.
- Thursday
- November 21st, 2024