
ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರ ಶುಭಾರಂಭಗೊಂಡಿತು. ಸಿಡಿಪಿಒ ರಶ್ಮಿ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲಮೊಗ್ರ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಶ ಜಯಶ್ರೀ ಚಾಂತಳ ವಹಿಸಿದ್ದರು.
ಐಸಿಡಿಸಿ ವಲಯ ಮೆಲ್ವಿಚಾರಕಿ ಶ್ರೀಮತಿ ವಿಜಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷ ಗೋಪಾಲಕೃಷ್ಣ ಬೆಂಡೋಡಿ,, ಗ್ರಾ.ಪಂ.ಸದಸ್ಯ ಮಾದವ ಚಾಂತಾಳ,ಬೆಂಡೊಡಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಲಿತ ಕುಮಾರಿ, ಕೊಲ್ಲಮೊಗ್ರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಶೀ ನಳಿನಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಲೀಲಾವತಿ ದೊಲನ ಮನೆ ಹಾಜರಿದ್ದರು.
ಸಭೆಯಲ್ಲಿ ಮಕ್ಕಳ ಪೋಷಕರು, ಊರವರು ಹಾಜರಿದ್ದರು.