ಅದೊಂದು ಸಮಯವಿತ್ತು ಅವನ ಬಳಿ ಎಲ್ಲವೂ ಇತ್ತು, ಎಲ್ಲರೂ ಇದ್ದರು. ಆದರೆ ಸಮಯ ತನ್ನ ದಿಕ್ಕನ್ನು ಬದಲಿಸಿತು, ಸಮಯದ ದಿಕ್ಕು ಬದಲಾದಂತೆ ಅವನ ಬದುಕು ಸಹ ಬದಲಾಯಿತು. ಎಲ್ಲವೂ, ಎಲ್ಲರೂ ಇದ್ದ ಅವನ ಬದುಕಿನಲ್ಲಿ ಏನೂ ಇಲ್ಲದಂತಾಯಿತು, ಎಲ್ಲರೂ ಅವನಿಂದ ದೂರವಾಗಿದ್ದರು. ಅವನು ದಾರಿ ತೋಚದೇ ಏಕಾಂಗಿಯಾಗಿ ಮುನ್ನಡೆಯುತ್ತಿದ್ದ. ಅವನು ನಡೆದ ಆ ದಾರಿಯು ಶಬ್ದಗಳಿಲ್ಲದೇ ಮೌನವಾಗಿತ್ತು. ಆದರೆ ಆ ಮೌನವಾದ ದಾರಿಯಲ್ಲೂ ಒಂದು ಶಬ್ದ ಅಡಗಿತ್ತು, ಆ ಶಬ್ದವು ಅವನ ಮನಸ್ಸಿನ ಕದವನ್ನು ತಟ್ಟುತ್ತಿತ್ತು. ಆ ಕದವನ್ನು ತೆರೆದಾಗ ಅಲ್ಲೊಂದು ಬೆಳಕು ಕಂಡಿತು, ಆ ಬೆಳಕು ಅವನಿಗೆ ಹೊಸ ದಾರಿಯನ್ನೇ ತೋರಿಸಿತು, ಆ ದಾರಿ ಅವನ ಬದುಕನ್ನೇ ಬದಲಿಸಿತು. ಅಲ್ಲಿ ಬದಲಾದದ್ದು ಅವನ ಬದುಕೇ ಹೊರತು ಅವನಲ್ಲ, ಅವನು ಎಂದಿಗೂ ಬದಲಾಗುವುದಿಲ್ಲ. ಆದರೆ ಈ ಪಯಣದಲ್ಲಿ ಅವನೊಂದು ಪಾಠವನ್ನು ಕಲಿತ “ಇಂದು ನೀ ಸೋತಿರಬಹುದು ಆದರೆ ನಾಳೆಯ ಗೆಲುವು ನಿನ್ನದೇ ಆಗಿರಬಹುದು. ಏಕೆಂದರೆ ಸಮಯ ಯಾವತ್ತೂ ಒಂದೇ ರೀತಿ ಇರುವುದಿಲ್ಲ, ಸಮಯವು ಖಂಡಿತವಾಗಿ ನಿನ್ನತ್ತ ತಿರುಗಿಯೇ ತಿರುಗುತ್ತದೆ, ನಿನಗೂ ಒಂದು ಸಮಯ ಬಂದೇ ಬರುತ್ತದೆ…”
✍️ಉಲ್ಲಾಸ್ ಕಜ್ಜೋಡಿ