ಸುಮಾರು 50 ಲಕ್ಷ ಮಾನ್ಯ ಸಚಿವರ ಅನುದಾನ ಮತ್ತು 1ಲಕ್ಷ ಗ್ರಾಮ ಪಂಚಾಯತ್ ಅನುದಾನದಿಂದ ಕಾವಿನಮೂಲೆ ಪಾಟಾಜೆ ರಸ್ತೆ ಕಾಂಕ್ರಿಟೀಕರಣದ ಲೋಕಾರ್ಪಣೆ ಮತ್ತು ಧನ್ಯತಾ ಸಮಾರಂಭವು ಕಾವಿನಮೂಲೆ ನಂದನ ಫಾರ್ಮ್ ನಲ್ಲಿ ನಡೆಯಿತು.
ಲೋಕ ರ್ಪಣೆ ಗೊಳಿಸಿ , ಧನ್ಯತಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಸರಕಾರವು ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡಿ ಸಮಗ್ರ ಅಭಿವೃದ್ಧಿಗೆ ಸರ್ವ ರೀತಿಯಲ್ಲೂ ಶ್ರಮಿಸುತ್ತಿದೆ. ಸರಕಾರದ ಜೊತೆ ಅದರ ಫಲಾನುಭವಿಗಳು ಕೈ ಜೋಡಿಸಿದಾಗ ನಡೆದ ಕಾಮಗಾರಿ ಗಳು ಉತ್ತಮವಾಗಿರಲು ಸಾಧ್ಯ, ಜೊತೆಗೆ ಯುವಶಕ್ತಿ ಹೆಚ್ಚಿನ ನಾಯಕತ್ವ ವಹಿಸಿ ಕೊಂಡು ಶ್ರಮ ವಹಿಸಿದಾಗ ಅದರ ಮೌಲ್ಯ ಉತ್ತಮ ವಾಗಿದ್ದು, ಅದರ ಪ್ರಯೋಜನ ಮುಂದಿನ ಪೀಳಿಗೆಯವರೆಗೂ ಉಳಿಯಲು ಸಾಧ್ಯ, ಇದರೊಂದಿಗೆ ಸಮಗ್ರ ಧೇಶದ ಅಭಿವ್ರದ್ದಿಗೆ ಪೂರಕವಾಗಲಿದೆ ಎಂದು ಮಾತನಾಡಿದರು.ಹಾಗೂ ವ್ಯವಸ್ಥಿತ ಚರಂಡಿ ಕಾಮಗಾರಿಗೆ ರೂ. 5.00 ಲಕ್ಷ ಮಂಜೂರುಗೊಳಿಸುವುದಾಗಿ ತಿಳಿಸಿದರು. ಅಲ್ಲದೆ ಸಚಿವರಿಗೆ ಮತ್ತು ವಿಶೇಷವಾಗಿ ಕಾಮಗಾರಿ ಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮ ಸಭಾದ್ಯಕ್ಷತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪನ್ನೆ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಗೌರಿ ನೆಟ್ಟಾರು, ವಾರ್ಡ್ ಸದಸ್ಯರಾದ ಶ್ರೀ ಅನಿಲ್ ರೈ ಚಾವಡಿಬಾಗಿಲು,ಬಿಜೆಪಿ ಮುಖಂಡರಾದ ವೆಂಕಟ್ ವಳಲಂಬೆ,ಕಾವಿನಮೂಲೆ ಭಾಗದ ಹಿರಿಯ ಸಾಮಜಿಕ ಧುರೀಣರಾದ ಶ್ರೀ ಚಿದಾನಂದ ರಾವ್ ಪಾಟಾಜೆ, ಹಿರಿಯ ಪ್ರಗತಿಪರ ಕ್ರಷಿಕರು ಶ್ರೀ ವೆಂಕಟರಮಣ ಭಟ್ ಕಾವಿನಮೂಲೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಿರಿಯ ಇಂಜಿನಿಯರು ಶ್ರೀ ಮಣಿಕಂಟ, ಮುಖ್ಯ ಅತಿಥಿಗಳಾಗಿ ಗ್ರಾಮ ಸ್ವರಾಜ್ಯ ತಂಡದ ಅಧ್ಯಕ್ಷರಾದ ಶ್ರೀ ಆರ್ ಕೆ ಭಟ್ ಕುರುಂಬುಡೇಲು ಭಾಗವಹಿಸಿದ್ದರು,ಶ್ರೀ ರಾಮ್ ಪಾಟಾಜೆ ಯವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು.ಸುಧಾಕರ ನೆಟ್ಟಾರು ಧನ್ಯವಾದ ಸಮರ್ಪಿಸಿ ಸಾಗರ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.ಊರಿನ ಪ್ರಮುಖ ಗಣ್ಯರು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- Thursday
- November 21st, 2024