ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು. ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ,ಬಳಿಕ ಸಭಾಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ದೀಪ ಪ್ರಜ್ವಲನೆ ಮಾಡಿದರು.
ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಬಾಳಬೇಕು.ಪ್ರೀತಿ ವಿಶ್ವಾಸ,ನಂಬಿಕೆ ಇದ್ದರೆ ಸಮಸ್ಯೆ ನಿವಾರಣೆ ಸಾಧ್ಯ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್ , ಸುಳ್ಯ ಸರ್ಕಲ್ ಇಲ್ಸ್ ಪೆಕ್ಟರ್ ರವೀಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.
ಪೊಲೀಸ್ ಅಧೀಕ್ಷಕ ಡಾ.ಅಮಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಎಡಿಷನಲ್ ಎಸ್ಪಿ ಧರ್ಮಪ್ಪ ವಂದಿಸಿದರು. ನಿವೃತ್ತ ಎ.ಎಸ್.ಐ.ಭಾಸ್ಕರ ಅಡ್ಕಾರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಇಂಜಿನಿಯರ್ ಸಣ್ಣೇ ಗೌಡ, ಕಾಂಟ್ರಾಕ್ಟರ್ ದಿನೇಶ್, ಸುಳ್ಯ, ಬೆಳ್ಳಾರೆ ಠಾಣೆಯ ಉಪನಿರೀಕ್ಷಕರು,ಪೊಲೀಸರು ಹಾಗೂ ಹಲವು ಜನ ಗಣ್ಯರು ಉಪಸ್ಥಿತರಿದ್ದರು.