Ad Widget

ನಡುಗಲ್ಲು : ಬೀಳ್ಕೊಡುಗೆ ಸಮಾರಂಭ

ಮಾ.10ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಏಳನೇ ತರಗತಿ ವಿದ್ಯಾರ್ಥಿಗಳಿಂದ ವಿದಾಯ ಗೀತೆ, ವಿದ್ಯಾರ್ಥಿಗಳಿಂದ ಅನಿಸಿಕೆ, ಶಿಕ್ಷಕರಿಂದ ಶುಭ ಹಾರೈಕೆಗಳು ಅಧ್ಯಕ್ಷರಿಂದ ಅಭಿನಂದನಾ ಮಾತು ನಡೆಯಿತು. ಈ ದಿನದ ವಿಶೇಷವಾಗಿ ವಿದ್ಯಾರ್ಥಿಗಳು ಕೇಕ್ ಕಟ್ ಮಾಡಿ ಎಲ್ಲರಿಗೂ ವಿತರಿಸಿ ಸಂಭ್ರಮಿಸಿದರು. ಏಳನೇ ತರಗತಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಬಳಗಕ್ಕೆ, ಶಿಕ್ಷಕ ವೃಂದಕ್ಕೆ ಲಘು ಉಪಹಾರ ವ್ಯವಸ್ಥೆ ಮಾಡಿದರು. ಶಾಲೆಗೆ ಅಕ್ಷರ ದಾಸೋಹ ತಟ್ಟೆ ಸ್ಟಾಂಡ್ ಕೊಡುಗೆಯಾಗಿ ಕೊಟ್ಟರು. ಆ ದಿನದ ಮಧ್ಯಾಹ್ನದ ಬಿಸಿ ಊಟಕ್ಕಾಗಿ ಏಳನೇ ತರಗತಿ ವಿದ್ಯಾರ್ಥಿ ಗಿನೇಶ್ ಪೋಷಕರು ಪಾಯಸದ ವ್ಯವಸ್ಥೆಯನ್ನು ಮಾಡಿದ್ದರು. ಹಾಗೆಯೇ ಮಾಜಿ ಸೈನಿಕರಾದ ಸುಂದರ ಗೌಡ ಮರಕತ ಇವರು ಎಲ್ಲರಿಗೂ ಸಿಹಿ ತಿಂಡಿ ವಿತರಿಸಿದರು. ಕುಮಾರಿ ಶ್ರೇಯ ಏಳನೇ ತರಗತಿ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮವನ್ನು ವಂದನಾರ್ಪಣೆ ಮಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading