- Thursday
- November 21st, 2024
ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.19 ಮತ್ತು 20ರಂದು ವಿಜೃಂಭಣೆಯಿಂದ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು.ಬೆಳಿಗ್ಗೆ ದುಗ್ಗಲಾಯ ದೈವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ನೇಮೋತ್ಸವ ಯಶಸ್ವಿಯಾಗಿ ನಡೆಯಲೆಂದು ಪ್ರಾರ್ಥಿಸಿ ಅವರ ತೋಟದಿಂದ ಮುಹೂರ್ತದ ಗೊನೆ ಕಡಿದು ದೈವಸ್ಥಾನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರಾದ ಸುಂದರ...
ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ದೈವಸಾನಿಧ್ಯದಲ್ಲಿ ಮಾ.14 ರಸಂಕ್ರಮಣದಂದು ಕೊರಗಜ್ಜನಿಗೆ ಅಗೇಲು ಸೇವೆ ನಡೆಯಲಿದೆ. ಅಲ್ಲದೆ ಪ್ರತಿ ಮಂಗಳವಾರ ಪ್ರಶ್ನಾ ಚಿಂತನೆ ಮತ್ತು ಪ್ರಾರ್ಥನೆ ನಡೆಯಲಿದೆ. ಅಮವಾಸ್ಯೆ ದಿನ ವಿಶೆಷ ಕೊರಗಜ್ಜನಿಗೆ ವಿಶೇಷ ಪ್ರಾರ್ಥನೆ ಇರುವುದು. ಕೊರಗಜ್ಜನಿಗೆ ಅಗೇಲು ಸೇವೆ ಮಾಡಿಸುವವರು 2 ದಿನ ಮುಂಚಿತವಾಗಿ ತಿಳಿಸಬೇಕಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ತೊಡಿಕಾನ ಗ್ರಾಮದ ದೊಡ್ಡಕುಮೇರಿಯಲ್ಲಿ ದೈವಸ್ಥಾನದ ಬ್ರಹ್ಮಕಲಶದ ಬಳಿಕ ಪ್ರಥಮ ಬಾರಿಗೆ ಗುಳಿಗ ದೈವ , ಮೊಗೇರ್ಕಳ ದೈವಗಳು , ತನ್ನಿಮಾನಿಗ ಹಾಗೂ ಕೊರಗ ತನಿಯ ದೈವಗಳ ನೇಮೋತ್ಸವ ಮಾರ್ಚ್ 11 ಮತ್ತು 12 ರಂದು ನಡೆಯಿತು. ಮಾ. 10 ರಂದು ಹಸಿರುಕಾಣಿಕೆ ನಡೆಯಿತು, ಮಾ. 11 ರಂದು ಬೆಳಿಗ್ಗೆ ಗಣಹೋಮ , ಸ್ಥಳಶುದ್ದಿ , ಶುದ್ದಿಕಲಶ...
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್ ರೊಮ್ ಉದ್ಘಾಟಣಾ ಕಾರ್ಯಕ್ರಮವು ಮಾ.೧೧ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ.ಸಿ.ಇ.ಯ ಹೆಮ್ಮೆಯ 1991-92ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳಾದ ಶಂಕರ್ ದಯಾಳ್ ಹಾಗೂ ಶರತ್ ಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಉದ್ಘಾಟಕರಾಗಿ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ನೆರವೇರಿಸಿದರು. ಅವರು ಮಾತನಾಡಿ ಹಳೆ ವಿದ್ಯಾರ್ಥಿಗಳು ಕಾಲೇಜಿನ ಆಸ್ತಿ. ಕಾಲೇಜು ನೀಡಿದ ನಾಲ್ಕು...
ಮಾ.10ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಏಳನೇ ತರಗತಿ ವಿದ್ಯಾರ್ಥಿಗಳಿಂದ ವಿದಾಯ ಗೀತೆ, ವಿದ್ಯಾರ್ಥಿಗಳಿಂದ ಅನಿಸಿಕೆ, ಶಿಕ್ಷಕರಿಂದ ಶುಭ ಹಾರೈಕೆಗಳು ಅಧ್ಯಕ್ಷರಿಂದ ಅಭಿನಂದನಾ...