



ಮಡಪ್ಪಾಡಿಯ ಶೀರಡ್ಕ ಭಾಗದಲ್ಲಿ ಅರಣ್ಯಕ್ಕೆ ಬಿದ್ದ ಬೆಂಕಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದ್ದು ರಬ್ಬರ್ ತೋಟದ ಕೃಷಿಕರು ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯವರು ಕಳೆದ ಕೆಲವು ದಿನಗಳಿಂದ ಬೆಂಕಿ ನಂದಿಸಲು ನಿರಂತರವಾಗಿ ಶ್ರಮವಹಿಸುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲವೆಂದು ತಿಳಿದು ಬಂದಿದೆ. ನೂರಾರು ಎಕರೆಯಷ್ಟು ಹೊತ್ತಿ ಉರಿದ ಹಾಗೆ ಕಾಣಿಸುತ್ತಿದೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ಸ್ಥಳೀಯರು ಕೈಜೋಡಿಸಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.