
ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ (ಬಿ.ಎಂ.ಎಸ್) ದ ವತಿಯಿಂದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅನ್ನ ಸಂತರ್ಪಣೆಯ ಬಾಬ್ತು ದೇಣಿಗೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ರವರಿಗೆ ಸಂಘದ ಅಧ್ಯಕ್ಷ ರಾಧಾಕೃಷ್ಣ ರವರು ನಗದು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಬಾಬು ಗೌಡ ಕಡೆಂಗ ಹಾಗೂ ಅಟೋ ಚಾಲಕರು ಉಪಸ್ಥಿತರಿದ್ದರು.