
ಮೀನು ಸಾಕಣಿಕೆಗೆ ಆಸಕ್ತ ಫಲಾನುಭವಿಗಳಿಗೆ ಇಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಮಡೆಂಜಿ ಮೀನು ಮರಿಗಳನ್ನು ಮೀನುಗಾರಿಕೆ ಸಚಿವರಾದ ಎಸ್. ಅಂಗಾರ ರವರು ವಿತರಿಸಿದರು. ಈ ಸಂದರ್ಭದಲ್ಲಿ ಸುಮಾರು ಐದು ಸಾವಿರ ಮೀನು ಮರಿಗಳನ್ನು ವಿತರಿಸಲಾಯಿತು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ. ತೀರ್ಥರಾಮ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಹಾಶೀರ್ ಮತ್ಯ ರೈತ ಉತ್ಪದಕಾರಾ ಕಂಪನಿಯ ನಿರ್ದೇಶಕರಾದ ಸುಪ್ರೀತ್ ಮೋಂಟಡ್ಕ, ಪುತ್ತೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಾರದ ಮಂಜುಳಾ ಶೆಣೈ, ಸುಧಾಕರ್,ಗುರುಸ್ವಾಮಿ ಬೀರಮOಗಿಲ, ಸಿಇಓ ಧನುಷ್, ಮೊದಲದವರು ಉಪಸ್ಥಿತರಿದ್ದರು.