Ad Widget

ಸಾಹಿತಿ ಭೀಮರಾವ್ ವಾಷ್ಠರ್ ಅವರ ಜನ್ಮದಿನ ಸಂಭ್ರಮ
ಸಾಹಿತ್ಯ ಕೃತಿಗಳ ಬಿಡುಗಡೆ – ಪ್ರಶಸ್ತಿ ಬಿರುದು ಪ್ರದಾನ – ಕವಿಗೋಷ್ಠಿ ಸಮಾರಂಭ

. . . . . . . . .

ಸುಳ್ಯದ ಚಂದನ ಸಾಹಿತ್ಯ ವೇದಿಕೆಯ 12 ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಹಿತಿ , ಜ್ಯೋತಿಷಿಯಾದ ಎಚ್ .ಭೀಮರಾವ್ ವಾಷ್ಠರ್ ರವರ 47 ನೇ ವರ್ಷದ ಹುಟ್ಟುಹಬ್ಬ ಸಂಭ್ರಮದ ಪ್ರಯುಕ್ತ ಚಂದನ ಕವಿ ಸಂಗಮ -2023 ಸಮಾರಂಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ , ಕೃತಿಗಳ ಬಿಡುಗಡೆ , ಹಾಡೊಂದು ನಾ ಹಾಡುವೆನು ಫೈನಲ್ ಸಂಗೀತ ಸ್ಪರ್ಧೆ , ಸಾಧಕರಿಗೆ ಬಿರುದು – ರಾಜ್ಯಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಿತು . ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಳ್ಯದ ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಭಟ್ ರವರು ವಹಿಸಿದ್ದರು . ಸರ್ವಾದ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ನಾರಾಯಣ ನಾಯ್ಕ ಕುದುಕೋಳಿ ರವರು ವಹಿಸಿ ಸಾಹಿತ್ಯ ಅಂತರಂಗದಿಂದ ಮೂಡಿದಾಗ ಮಾತ್ರ ಸಮಾಜದಲ್ಲಿ ಪ್ರತಿಫಲನಗೊಂಡು ಸಮಾಜದಲ್ಲಿ ಬದಲಾವಣೆ ಮೂಡುವದು ಖಂಡಿತ ಅಂತ ಹೇಳಿದರು . ಸಾಧಕರಿಗೆ ಪ್ರಶಸ್ತಿ ಮತ್ತು ಬಿರುದು ಪ್ರದಾನ ಮಾಡಿದ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಶುಭ ಹಾರೈಸಿದರು .ಕಾಸರಗೋಡಿನ ಲತಾ ಆಚಾರ್ಯ ಬನಾರಿ ಅವರ ಭಾವಗಾನ ಸಾಹಿತ್ಯ ಕೃತಿ ಮತ್ತು ಶ್ರೀ ಶರಭಯ್ಯ ಸ್ವಾಮೀ ತುರ್ವಿಹಾಳ ಅವರ ಭಾವ ಭಾಮಿನಿ ಜೀವ ಷಟ್ಪದಿ ಕೃತಿಗಳನ್ನು.ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಎಚ್ ಭೀಮರಾವ್ ವಾಷ್ಠರ್ ರವರು ಬಿಡುಗಡೆ ಮಾಡಿದರು ..ಹಿರಿಯ ಸಾಹಿತಿ ಶ್ರೀ ಹರಿ ನರಸಿಂಹ ಉಪಾಧ್ಯಾಯ ರವರು ಎರಡೂ ಕೃತಿಗಳನ್ನು ಪರಿಚಯ ಮಾಡಿದರು .ಸಿ ಕೆ ನವೀನಚಂದ್ರ ಚಾತುಬಾಯಿ ಅವರಿಗೆ 2023 ನೇ ಸಾಲಿನ ಆದರ್ಶ ಕೃಷಿರತ್ನ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು . ಸಾಧಕರಾದ ಚಂದ್ರಾವತಿ ಬಡ್ಡಡ್ಕ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ , ಕೃಷ್ಣಪ್ಪ ಬಂಬಿಲ , ಚಂದನ ರಂಗಕಲಾ ರತ್ನ ಪ್ರಶಸ್ತಿ , ಮುರಳಿಕೃಷ್ಣ ಯಾದವ್ ನೀರ್ಚಾಲು ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ , ಲತಾ ಆಚಾರ್ಯ ಬನಾರಿ ಅವರಿಗೆ ಚಂದನ ಕಾವ್ಯ ಕುಸುಮ ಪ್ರಶಸ್ತಿ , ಸುಬ್ರಾಯ ಕಲ್ಪನೆ ಅವರಿಗೆ ಚಂದನ ಸಂಗೀತ ರತ್ನ ಪ್ರಶಸ್ತಿ , ಮಂಜುನಾಥ ನಾಯಕ ಎನ್ ಆರ್ ಅವರಿಗೆ ಚಂದನ ಸಾಹಿತ್ಯ ಕಿರಣ ಪ್ರಶಸ್ತಿ , ಅಬ್ದುಲ್ ಸಮದ್ ಬಾವಾ ಅವರಿಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು .ನಂತರ ಚಂದನ ಹಿರಿಯ ಸಾಹಿತ್ಯ ಗೋಷ್ಠಿ ನಡೆಯಿತು . ಹಾಡೊಂದು ನಾ ಹಾಡುವೆನು ಸಂಗೀತ ಸ್ಪರ್ಧೆಯ ಕಾರ್ಯಕ್ರಮವೂ ಕೂಡ ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ ಅವರ ನೇತೃತ್ವದಲ್ಲಿ ನಡೆಯಿತು . ಖ್ಯಾತ ಕವಯಿತ್ರಿ ಶಾಂತಾ ಕುಂಟಿನಿ , ಸಾಹಿತಿ ವೈಲೇಶ್ ಪಿ ಎಸ್ ಕೊಡಗು , ಗೋಪಾಲ ಕೃಷ್ಣ ಭಟ್ ಮಾನವಳಿಕೆ , ಕವಿಗೋಷ್ಠಿ ಉದ್ಘಾಟಕರಾದ ಹಿರಿಯ ಸಾಹಿತಿ ಹಾ ಮ ಸತೀಶ್ , ವೀರೇಶ್ ಎಂ ಎಸ್ ಸಿಂಧನೂರು ಮುಖ್ಯ ಅತಿಥಿಗಳಾಗಿದ್ದರು. ಖ್ಯಾತ ಕವಯಿತ್ರಿ ವಿಂಧ್ಯಾ ಎಸ್ ರೈ ಅವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು .ಒಟ್ಟು 40 ಜನ ಕವಿಗಳು ಭಾಗವಹಿಸಿದ್ದರು . ಶ್ರೀಮತಿ ಸುಮಾ ಕಿರಣ್ ಮಣಿಪಾಲ್ ಮತ್ತು ಶ್ರೀಮತಿ ಆಶಾ ಮಯ್ಯ ಹಾಗೂ ಸುಮಂಗಲ ಲಕ್ಷ್ಮಣ ಕೋಳಿವಾಡ ನಿರೂಪಿಸಿದರು . ಪೆರುಮಾಳ ಲಕ್ಷ್ಮಣ ಐವರ್ನಾಡು ಪ್ರಾರ್ಥನೆ ಹಾಡಿದರು . ಸಮ್ಯಕ್ತ್ ಜೈನ ಕಡಬ ಮತ್ತು ನಾರಾಯಣ್ ಕುಂಬ್ರ ವಂದಿಸಿದರು .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading