
ಸುಳ್ಯ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಮಾ.9ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂದರು ಹಾಗೂ ಒಳನಾಡು ಸಚಿವ ಎಸ್. ಅಂಗಾರರರು ಮಾತನಾಡಿ ಮಾರ್ಚ್ 11ರಂದು ಬಿಜೆಪಿ ಸುಳ್ಯ ಮಂಡಲದ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಸುಳ್ಯ ನಗರದ ಮುಖ್ಯರಸ್ತೆಯಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. ಸಂಪಾಜೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ವಿಷ್ಣು ವೃತ್ತದಿಂದ ಜ್ಯೋತಿ ವೃತ್ತದವರೆಗೆ ರೋಡ್ ಶೋ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್, ಡಿ. ವಿ ಸದಾನಂದ ಗೌಡ ಹಾಗೂ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಹರೀಶ್ ಕಂಜೀಪಿಲಿ ಮಾತನಾಡಿ ಪುತ್ತೂರಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಹಾಗೂ 8 ಸಾವಿರದಷ್ಟು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 185 ಬೂತ್ ಗಳಲ್ಲಿ ಕಾರ್ಯಕ್ರಮ ಮುಗಿದಿದೆ. ಸುಮಾರು 4:30 ಗಂಟೆಗೆ ಕಾರ್ಯಕ್ರಮಗಳು ಮುಗಿಯಲಿದೆ ಹಾಗೂ ಸುಳ್ಯ ದುಗ್ಗಲಡ್ಕ ರಸ್ತೆಯ ಅನುದಾನದ ಬಗ್ಗೆ ಹೇಳಿದರು. ಭಾರತೀಯ ಜನತಾ ಪಾರ್ಟಿ ಬರೀ ರಾಜಕೀಯ ಕೆಲಸವನ್ನು ಮಾತ್ರವಲ್ಲದೆ ಧಾರ್ಮಿಕ ಸೇವೆಯನ್ನು ಮಾಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಎ.ವಿ ತೀರ್ಥಾರಾಮ, ಭಾಗೀರಥಿ ಮುರುಳ್ಯ, ರಾಕೇಶ್ ಕೆಡೆಂಜಿ, ತೇಜಸ್ವಿನಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಸುಬೋಧ್ ಶೆಟ್ಟಿ, ಸುನೀಲ್ ಕೇರ್ಪಳ ಉಪಸ್ಥಿತರಿದ್ದರು.