ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉನ್ನತ ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖಾ ಸಚಿವ ಡಾ.ಅಶ್ವಥ್ ನಾರಾಯಣ್ ಸಿ.ಎನ್. ಅವರು ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿದರು.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಶಾಲಾ ಮೈದಾನದಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದು ಕಾರಲ್ಲಿ ಸುಬ್ರಹ್ಮಣ್ಯ ಕ್ಕೆ ಬಂದರು.
ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಚಿವರನ್ನು ಸ್ವಾಗತಿಸಲಾಯಿತು.
ಸಚಿವರು ಕುಟುಂಬ ಸಮೇತ ದೇವಸ್ಥಾನದಲ್ಲಿ ಆಶ್ಲೇಷ ಪೂಜೆ ನೆರವೇರಿಸಿದರು. ಬಳಿಕ ಮಹಾಪೂಜೆಯಲ್ಲಿ ಭಾಗಿಯಾದರು. ದೇವಸ್ಥಾನದಲ್ಲಿ ಊಟದ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. ಬಳಿಕ ದೇವಸ್ಥಾನ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಸಚಿವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಆ ಬಳಿಕ ಅಲ್ಲಿಂದ ತೆರಳಿದರು.
ಕಾರ್ಯಕ್ರಮದುದ್ದಕ್ಕೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮೀನುಗಾರಿಕಾ ನಿಗಮ ಅಧ್ಯಕ್ಷ ಎ.ವಿ ತೀರ್ಥರಾಮ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಎಇಒ ಪುಷ್ಪಲತಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್ ಕುಮಾರ್, ದೇವಸ್ಥಾನದ ಶಿಷ್ಠಚಾರ ಅಧಿಕಾರಿ ಜಯರಾಮ ರಾವ್ ಹಾಗೂ ಸಿಬ್ಬಂದಿಗಳು, ಎಸ್ ಐ ಮಂಜುನಾಥ್, ಮುರಳಿ ಮತ್ತಿತರರು ಉಪಸ್ಥಿತರಿದ್ದರು.