
ಐವರ್ನಾಡಿನ ಕೃಷಿಕರಾದ ಸಿ.ಕೆ.ನವೀನ ಚಾತುಬಾಯಿಯವರಿಗೆ 2023 ನೇ ಸಾಲಿನ ಚಂದನ ಆದರ್ಶ ಕೃಷಿ ರತ್ನ ಪ್ರಶಸ್ತಿಯನ್ನು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಟಿ ಕವಿಸಂಗಮದಲ್ಲಿ ನೀಡಿ ಗೌರವಿಸಲಾಯಿತು.ಇವರು ಸಮಗ್ರ ಕೃಷಿಯೊಂದಿಗೆ ವಿಶಿಷ್ಟವಾದ ಮುತ್ತು ಕೃಷಿಯನ್ನು ಮಾಡಿ ಯಶಸ್ವಿಯಾದವರು..ಇವರಿಗೆ ಕೃಷಿ ಇಲಾಖೆಯಿಂದ 2022 ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿ ಪ್ರಶಸ್ತಿ ನೀಡಲಾಗಿತ್ತು..