ಕುಲ್ಕುಂದದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ೫೪ನೇ ವರ್ಷದ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಾ.3 ಮತ್ತು ಮಾ. 4 ರಂದು ನಡೆಯಿತು.
ಮಾ.3 ರ ಸಂಜೆ ಭಂಡಾರ ತೆಗೆದ ಬಳಿಕ ಭಂಡಾರದ ಮೆರವಣಿಗೆಯು ದೈವಸ್ಥಾನದಿಂದ ಕುಲ್ಕುಂದದ ತನಕ ನಡೆಯಿತು. ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಬಳಿಕ ಕುಲ್ಕುಂದ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ, ಊರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಳಿಕ ಶೃಂಗೇರಿ ಪ್ರೆಂಡ್ಸ್ ಕುಲ್ಕುಂದ ಕಾಲನಿ ಆಶ್ರಯದಲ್ಲಿ ಹಾಸ್ಯ ಕಲಾವಿದ ಉಮೇಶ್ ಮಿಜಾರ್ ಮತ್ತು ಬಳಗದಿಂದ ತೆಲಿಕೆದ ಗೊಂಚಿಲ್ ನೆರವೇರಿತು.ಬಳಿಕ ರಾತ್ರಿ ಕುಲ್ಚಾಟು ದೈವದ ನಡಾವಳಿ ನಡೆಯಿತು. ನಂತರ ಗೆಜ್ಜೆಗಿರಿ ಮೇಳದವರಿಂದ “ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶಿತವಾಯಿತು. ಮಾ.4 ರ ಪ್ರಾತಃಕಾಲ ಕಳಸಾಟ ನಡೆಯಿತು. ನಂತರ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನೆರವೇರಿತು. ನಂತರ ಮಾರಿಕಳ ಹಾಗೂ ಪ್ರಸಾದ ವಿತರಣೆ, ಗುಳಿಗ ದೈವದ ನೇಮ ಜರುಗಿತು.
ಸಮಿತಿ ಪದಾಧಿಕಾರಿಗಳು, ಸಹಸ್ರಾರು ಭಕ್ತಾಧಿಗಳು ಉಪಸ್ಥಿತರಿದ್ದರು.