ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನ ಸನ್ನಿಧಿಯಲ್ಲಿ ಅಡ್ಕಾರು ಕುಟುಂಬಸ್ಥರ ಮುಂದಾಳತ್ವದಲ್ಲಿ, ದೈವಂಕಟ್ಟು ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಮಾರ್ಚ್ 24, 25 ಹಾಗೂ 26 ರಂದು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದೆ. ಫೆ. 27 ರಂದು ಧಾನ್ಯ ಅಳೆಯುವುದು (ಕೂವಂ ಅಳಕ್ಕಲ್), ವೀಳ್ಯ ಕೊಡುವುದರೊಂದಿಗೆ ಮಹೋತ್ಸವ ಕ್ಕೆ ಚಾಲನೆ ನೀಡಲಾಗಿದೆ.
ಮಾ.22 ರಂದು ಬೆಳಿಗ್ಗೆ 7 ಗಂಟೆಗೆ ಗೂನೆ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 22 ಬೆಳಿಗ್ಗೆ 8 ಗಂಟೆಗೆ ರಕ್ತೇಶ್ವರಿ, ನಾಗ, ಗುಜಗ, ಬ್ರಹ್ಮ ರಾಕ್ಷಸು ತಂಬಿಲ, ರಾತ್ರಿ 7 ಗಂಟೆಗೆ ವಿಷ್ಣುಮೂರ್ತಿ ದೈವದ ಸ್ತೋತ್ರ ಆರಂಭ, ಪೊಟ್ಟನ್, ಕೊರತ್ತಿ ದೈವಗಳ ಕೋಲ ನಡೆಯಲಿದೆ. ಮಾರ್ಚ್ 23 ರಂದು ಬೆಳಿಗ್ಗೆ 7 ಗಂಟೆಯಿಂದ ಪಡಿಂಞಾರು ಚಾಮುಂಡಿ ಹಾಗೂ ವಿಷ್ಣುಮೂರ್ತಿ ದೈವಗಳ ಕೋಲ, ಮಾರ್ಚ್ 24 ರಂದು ಬೆಳಗ್ಗೆ ಗಂಟೆ 8 ಕ್ಕೆ ಹಸಿರುವಾಣಿ ಮೆರವಣಿಗೆ ಆರಂಭವಾಗಲಿದೆ.
ಬೆಳಗ್ಗೆ ಗಂಟೆ 9.45ರಿಂದ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಗಂಟೆ 11.00ಕ್ಕೆ ವೇದಮೂರ್ತಿ ಬ್ರಹ್ಮಶ್ರೀ ರವೀಶ ತಂತ್ರಿ ಶ್ರೀ ಕ್ಷೇತ್ರ, ಕುಂಟಾರು ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ ಗಂಟೆ 7.00ಕ್ಕೆ ಕೈವೀದು ನಂತರ ದೈವಗಳ ಕೂಡುವಿಕೆ ನಡೆಯಲಿದೆ. ಮಾರ್ಚ್ 25 ರಂದು ಸಂಜೆ ಗಂಟೆ 5.00ಕ್ಕೆ ಶ್ರೀ ಕಾರ್ನೋರ್ ದೈವದ ವೆಳ್ಳಾಟ, ರಾತ್ರಿ ಗಂಟೆ 7ಕ್ಕೆ ಶ್ರೀ ಕೋರಚ್ಚನ್ ದೈವದ ವೆಳ್ಳಾಟ, ರಾತ್ರಿ ಗಂಟೆ 9ಕ್ಕೆ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟ, ರಾತ್ರಿ ಗಂಟೆ 11ರಿಂದ ಶ್ರೀ ವಿಷ್ಣುಮೂರ್ತಿ ದೈವದ ಸ್ತೋತ್ರ ಆರಂಭ (ತೊಡಂಞಲ್), ರಾತ್ರಿ 11.30 ರಿಂದ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟ ನಡೆಯಲಿದೆ. ಮಾರ್ಚ್ 26 ಬೆಳಗ್ಗೆ ಗಂಟೆ 7ಕ್ಕೆ ಶ್ರೀ ಕಾರ್ನೋರ್ ದೈವ, ಬೆಳಗ್ಗೆ ಗಂಟೆ 9 ರಿಂದ ಶ್ರೀ ಕೋರಚ್ಚನ್ ದೈವ, ಬೆಳಿಗ್ಗೆ 11 ಕ್ಕೆ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟ, ಸಂಜೆ ಗಂಟೆ 3ಕ್ಕೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ, ಮತ್ತು ಸೂಟೆ ಒಪ್ಪಿಸುವುದು (ಆನಂದ ಬಾಳೆಹಿತ್ತಿರವರಿಂದ), ಸಂಜೆ ಗಂಟೆ 5.00ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ, ನಂತರ ಅಡ್ಕಾರು ಕುಟುಂಬದ ತರವಾಡು ಮನೆ ಅಂಗಣ ಪ್ರವೇಶ, ರಾತ್ರಿ 11 ಕ್ಕೆ ಸಂಪನ್ನ ( ಮರ ಪಿಳರ್ಕಲ್), ರಾತ್ರಿ ಗಂಟೆ 11.30ಕ್ಕೆ ಕೈವೀದು ನಡೆಯಲಿದೆ.
ಅನ್ನದಾನ : ಮಾರ್ಚ್ 22 ರಿಂದ 26ರ ವರೆಗೆ ನಿರಂತರ ಉಪಹಾರ ಮತ್ತು ಅನ್ನದಾನ ನಡೆಯಲಿದೆ.