ಯುವ ಕವಯತ್ರಿ ಪ್ರಿಯಾ ಸುಳ್ಯ ಬರೆದ ಕವನ ಸಂಕಲನ ಬಿಡುಗಡೆ
ಯುವ ಕವಯತ್ರಿ ಪ್ರಿಯಾ ಸುಳ್ಯರ ಚೊಚ್ಚಲ ಕವನ ಸಂಕಲನ “ನಾನು, ನಾನು… ನಾವು” ಪುನರೂರಿನ ಶ್ರೀ ವಿಶ್ವನಾಥ ದೇವಾಲಯದ ಸಭಾಂಗಣದಲ್ಲಿ ಮಾರ್ಚ್ 5ರಂದು ನಡೆದ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರುರವರು ಬಿಡುಗಡೆಗೊಳಿಸಿದರು. ಕವಯತ್ರಿ ಪ್ರಿಯಾ ಸುಳ್ಯ ಅವರು ಮಾತನಾಡಿ “ಯಾವುದೇ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿರುವ ಸಾಹಿತ್ಯ ಪೋಷಕರಾದ ಡಾ. ಶೇಖರ್ ಅಜೆಕಾರುರವರ ಈ ಕಾರ್ಯ ಶ್ಲಾಘನೀಯ”. ಪ್ರತಿಯೊಬ್ಬ ಬರಹಗಾರರಿಗೆ ತನ್ನ ಬರಹಗಳು ದಾಖಲೀಕರಣವಾಗೋದು ಪುಸ್ತಕ ರೂಪದಲ್ಲಿ ಹೊರ ಬಂದಾಗ. ಹಾಗಾಗಿ ನನ್ನ ಕನಸು ಇಂದು ನನಸಾಗಿದೆಯೆಂದರು. ಚೆನ್ನುಡಿಗಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುನ್ನುಡಿ ಬರೆದ ಡಾ.ಶೇಖರ ಅಜೆಕಾರು ಮತ್ತು ಬೆನ್ನುಡಿ ಬರೆದ ಡಾ.ಸುರೇಶ ನೆಗಳಗುಳಿ ಅವರನ್ನು ಕೃತಿಕಾರರಾದ ಪ್ರಿಯಾ ಸುಳ್ಯ ಸನ್ಮಾನಿಸಿದರು. ವೇದಿಕೆಯಲ್ಲಿ ಹರಿಕೃಷ್ಣ ಪುನರೂರು,ವಿಜಯ ಕುಮಾರ್ ಕೊಡಿಯಾಲ್ ಬೈಲ್,ಹಿರಿಯ ಯಕ್ಷಗಾನ ಅರುವ ಕೊರಗಪ್ಪ ಶೆಟ್ಟಿ,ಭುವನಭಿರಾಮ ಉಡುಪ ,ಅರುಷ್.ಎನ್. ಶೆಟ್ಟಿ ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸುನಿಧಿ ಅಜೆಕಾರು ಸ್ವಾಗತಿಸಿ, ಸುನಿಜ ಅಜೆಕಾರು ವಂದಿಸಿದರು.