
ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.12 ರಿಂದ 14 ರ ತನಕ ನಡೆಯಲಿರುವ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ನಡೆಯಲಿದ್ದು ಇದರ ಪೂರ್ವ ಭಾವಿಯಾಗಿ ಮುಹೂರ್ತದ ಗೊನೆ ಕಡಿಯುವ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ಅರ್ಚಕ ದಿವಿಜೇಶ್ ಕೆದಿಲಾಯ,ರಾಜೇಂದ್ರ ಪ್ರಸಾದ್ ಮೂಡತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಸದಸ್ಯರಾದ ಸುಧಾಮ ಆಲೆಟ್ಟಿ, ಬಾಬು ಗೌಡ ಕಡೆಂಗ,ಹೇಮನಾಥ ಕುರುಂಜಿ, ರಾಧಾಕೃಷ್ಣ ಕೋಲ್ಚಾರು, ತಂಗವೇಲು ಕುದ್ಕುಳಿ ಹಾಗೂ
ಗೋಪಾಲಕೃಷ್ಣ ಭಟ್ ಸುಳ್ಯ,ಆನಂದ ಪರಿವಾರ, ಜತ್ತಪ್ಪ ಗೌಡ ನಾಗಪಟ್ಟಣ, ಶರತ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.